ಧಾರವಾಡ: ದೆಹಲಿಯಲ್ಲಿ ರೈತರು ಚಳುವಳಿ ನಡೆಸುತ್ತಿದ್ದರೂ, ಕೇಂದ್ರ ಸರ್ಕಾರ ರೈತರ ಹೋರಾಟವನ್ನು ನಿರ್ಲಕ್ಷಿಸಿರುವುದು ಖಂಡನೀಯ. ರೈತ ವಿರೋಧಿ ಕಾನೂನನ್ನು ವಾಪಸ್ ಪಡೆಯಲು ಕೇಂದ್ರಕ್ಕೆ ಡಿಸೆಂಬರ್ 3 ರವರೆಗೆ ಗಡುವು ನೀಡಲಾಗಿದೆ. ಡಿ.4 ರಿಂದಲೇ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಸಮಿತಿ ನೇತೃತ್ವದಲ್ಲಿ ಚಳುವಳಿ ನಡೆಸಲಿದೆ ಎಂದು ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ್ ಎಚ್ಚರಿಸಿದರು.
ಧಾರವಾಡದಲ್ಲಿ ಮಾತನಾಡಿದ ಅವರು, ಚಳುವಳಿಯಿಂದ ರೈತರು ಹಿಂದೆ ಸರಿಯುವ ಮಾತೇ ಇಲ್ಲ. ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆ ಪ್ರದರ್ಶಿಸುತ್ತಿದೆ. ರೈತರು ಏಕೆ ಮಾತುಕತೆಗೆ ಹೋಗಬೇಕು. ಇದು ಖಂಡನೀಯ. ಇಷ್ಟೆಲ್ಲ ಬೆಳವಣಿಗೆ ನಡೆದರೂ, ಕಂಡು ಕಾಣದಂತಿರುವ ಪ್ರಧಾನಿ ನರೇಂದ್ರ ಮೋದಿಯವರ ನಡೆಯು ನಾಚೀಗೇಡು ಎಂದರು.
ಎಪಿಎಂಸಿ ಕಾಯ್ದೆ ತಂದಿದ್ದಾರೆ ಇದರಲ್ಲಿ ಕೆಲವು ಕಂಪೆನಿಗಳು ಒಪ್ಪಂದ ಮಾಡಿಕೊಂಡಿವೆ. ಪ್ರಧಾನ ಮಂತ್ರಿಗಳಿಗೆ ಕೃಷಿ ಮಾಡಿದ ಅನುಭವವೇ ಇಲ್ಲ. ರೈತರನ್ನು ಕಂಪೆನಿಗಳ ಕಾಲ ಕೆಳಗೆ ಹಾಕುವಂತೆ ಮಾಡಿದೆ. ಇದು ಈಸ್ಟ್ ಇಂಡಿಯಾ ಕಂಪೆನಿಗಳ ಹುನ್ನಾರವೆಂದು ಕೇಂದ್ರಕ್ಕೆ ತರಾಟೆ ತೆಗೆದುಕೊಂಡರು.
Kshetra Samachara
01/12/2020 06:37 pm