ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಬಿಜೆಪಿ ನೂತನ ಜಿಲ್ಲಾ ಕಚೇರಿ ಕಾಮಗಾರಿ ವೀಕ್ಷಣೆ

ಹುಬ್ಬಳ್ಳಿ : ಇಲ್ಲಿಯ ಅರವಿಂದ ನಗರದಲ್ಲಿ ನಿರ್ಮಾಣವಾಗುತ್ತಿರುವ ಭಾರತೀಯ ಜನತಾ ಪಾರ್ಟಿಯ ನೂತನ ಕಾರ್ಯಾಲಯ ಭವನದ ಕಾಮಗಾರಿಯನ್ನು ದೆಹಲಿಯಿಂದ ಆಗಮಿಸಿದ ರಾಷ್ಟ್ರೀಯ ಕಟ್ಟಡ ನಿರ್ಮಾಣ ಪ್ರಕಲ್ಪದ ಸಂಚಾಲಕ ಪ್ರಮುಖರಾದ ಶ್ರೀ ರವೀಂದ್ರ ರಾಜು ಅವರು ಶುಕ್ರವಾರ ಬೆಳಿಗ್ಗೆ ನೂತನ ಕಟ್ಟಡಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ವೀಕ್ಷಿಸಿದರು.

ನಂತರ ಗಣ್ಯರೊಡನೆ ಸಮಾಲೋಜನೆ ನಡೆಸಿ ಅಗತ್ಯವಾದ ಸಲಹೆ ಸೂಚನೆಗಳನ್ನು ನೀಡಿ ಕಾಮಗಾರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂಧರ್ಭದಲ್ಲಿ ಕಟ್ಟಡ ಸಮಿತಿಯ ರಾಜ್ಯ ಸದಸ್ಯರಾದ ಮಾ.ನಾಗರಾಜ, ಹು-ಧಾ ಮಹಾನಗರ ಜಿಲ್ಲಾ ಅಧ್ಯಕ್ಷ ಹಾಗೂ ಶಾಸಕ ಅರವಿಂದ ಬೆಲ್ಲದ, ಹು-ಧಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಪ್ರ.ಕಾರ್ಯದರ್ಶಿಗಳಾದ ದತ್ತಮೂರ್ತಿ ಕುಲಕರ್ಣಿ, ತಿಪ್ಪಣ್ಣ ಮಜ್ಜಗಿ, ವಕ್ತಾರ ರವಿ ನಾಯಕ, ಕೃಷ್ಣಾ ಗಂಡಗಾಳೇಕರ, ಇಂಜಿನಿಯರಗಳಾದ ವಿನಾಯಕ ಮಿಸ್ಕಿನ್, ವಾಸುದೇವ ಪಾಟೀಲ, ಸಂಜಯ ದೇಶಪಾಂಡೆ, ಮೊದಲಾದವರು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

06/11/2020 11:44 am

Cinque Terre

21.14 K

Cinque Terre

1

ಸಂಬಂಧಿತ ಸುದ್ದಿ