ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಿರುದ್ಧ ಬಾಂಬ್ ಸಿಡಿಸಿದ ವಿಜಯ ಕುಲಕರ್ಣಿ

ಹುಬ್ಬಳ್ಳಿ: ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ ಕುಲಕರ್ಣಿ ಬಂಧನ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ವಿನಯ ಕುಲಕರ್ಣಿ ಸಹೋದರ ವಿಜಯ ಕುಲಕರ್ಣಿ ಹೊಸ ಬಾಂಬ್ ಸಿಡಿಸಿದ್ದಾರೆ.

ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು,ಈ ಪ್ರಕರಣದಲ್ಲಿ ರಾಜಕೀಯ ಕೈವಾಡವಿದೆ.ಈ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಪಾತ್ರವಿದೆ ಎಂದು ನೇರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮೇಲೆ ಆರೋಪ ಮಾಡಿದ್ದಾರೆ.

ನಮ್ಮನ್ನ ರಾಜಕೀಯವಾಗಿ ಮುಗಿಸೋದಿಕ್ಕೆ ಈ ರೀತಿ ಕುತಂತ್ರ ಮಾಡುತ್ತಿದ್ದಾರೆ.ಕಾನೂನು ರೀತಿಯಾಗಿ ನಾವು ಹೋರಾಟ ಮಾಡಲಿದ್ದೇವೆ.ಏನೇ ಬಂದರೂ ನಾವು ಎದುರಿಸಲು ಸಿದ್ಧರಿದ್ದೇವೆ.ರಾಜಕೀಯವಾಗಿ ನಮ್ಮನ್ನ ಮುಕ್ತಾಯಗೊಳಿಸಲು ಈ ಪ್ರಕರಣ ನಮ್ಮನ್ನ ತಳುಕು ಹಾಕಿದ್ದಾರೆ.ಏನೇ ಕುತಂತ್ರ ಮಾಡಿದರೂ ನಾವು ಕಾನೂನು ರೀತಿ ಹೋರಾಟ ನಡೆಸಲಿದ್ದೇವೆ ಎಂದರು.

ನಾವಿಬ್ಬರೂ ರಾಜಕೀಯವಾಗಿ ಬಲಿಷ್ಟರಾಗಿರೋ ಕಾರಣ ಈ ರೀತಿ ಮಾಡುತ್ತಿದ್ದಾರೆ.ಲಿಂಗಾಯತ ಮುಖಂಡರು ಬೆಳೆಯಬಾರದೆಂದು ಪ್ರಹ್ಲಾದ ಜೋಶಿ ಈ ರೀತಿಯ ಕುತಂತ್ರ ರಾಜಕೀಯ ಮಾಡ್ತಾ ಇದ್ದಾರೆ ಎಂದರು.

Edited By : Manjunath H D
Kshetra Samachara

Kshetra Samachara

06/11/2020 10:14 am

Cinque Terre

50.4 K

Cinque Terre

16

ಸಂಬಂಧಿತ ಸುದ್ದಿ