ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ- ಕಳಪೆ ಕಾಮಗಾರಿ ಅಧಿಕಾರಿಗಳಿಗೆ ಚಳಿ ಬಿಡಿಸಿದ ರೈತರು

ಹುಬ್ಬಳ್ಳಿ- ಮಲಪ್ರಭಾ ಬಲದಂಡೆ ಕಾಲುವೆ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ತಾಲೂಕಿನ ರೈತರು ಅಧಿಕಾರಿಗಳಿಗೆ ಚಳಿ ಬಿಡಿಸುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಶಿವಾನಂದ ಕರಿಗಾರ ಅವರ ನೇತೃತ್ವದಲ್ಲಿ, ಬ್ಯಾಹಟ್ಟಿಯ ಎಂಆರ್ ‌ಬಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ರೈತರು, ಹಿರೇಕುಂಬಿ , ಮೊರಬ , ಬ್ಯಾಹಟ್ಟಿ ಕಿರೇಸೂರ ಹಾಗೂ ನವಲಗುಂದ ವ್ಯಾಪ್ತಿಯಲ್ಲಿ 2018-19 , 2019-20 ಹಾಗೂ 2020-21ನೇ ಸಾಲಿನಲ್ಲಿ ಮಲಪ್ರಭಾ ಬಲದಂಡೆ ನಾಲೆ ನಿರ್ಮಾಣ ಕಾರ್ಯ ಸರಿಯಾಗಿ ಕೈಗೊಳ್ಳದ್ದರಿಂದ, ರೈತರಿಗೆ ತೊಂದರೆ ಆಗಿದ್ದು ಕಾಮಗಾರಿ ಕೈಗೊಳ್ಳದೆ ಬಿಲ್ ಪಡೆಯಲಾಗಿದೆ ಎಂದು ಆರೋಪಿಸಿದರು...

ಕಳೆದ ಮೂರು ವರ್ಷಗಳಿಂದ 300 ಕೋಟಿ ರೂ.ಗಳಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದರು. ಈವರೆಗೆ ಕಾಮಗಾರಿ ಪೂರ್ಣಗೊಂಡಿಲ್ಲ. ಈ ಬಗ್ಗೆ ಈಗಾಗಲೇ ಸಂಬಂಧಿಸಿದ ಮಟ್ಟ ಅಧಿಕಾರಿಗಳಿಗೆ ತಿಳಿಸುತ್ತಾ ಬರಲಾಗುತ್ತಿದೆ.

ಅಲ್ಲದೇ ಕೆಡಿಪಿ‌ ಸಭೆಯಲ್ಲೂ ಚರ್ಚಿಸಲಾಗಿದೆ. ಆದರೆ ಈವರೆಗೆ ಮಾತ್ರ ಕಾಮಗಾರಿ ಪೂರ್ಣಗೊಂಡಿಲ್ಲ.‌ ಪರಿಣಾಮ ರೈತರಿಗೆ ಸರಿಯಾಗಿ ಹೊಲಗಳಿಗೆ ಹೋಗಲು ದಾರಿ ಇಲ್ಲದೇ ರೈತರು ಪರದಾಡುವಂತಾಗಿದ್ದು, ಕೂಡಲೇ ಕಾಮಗಾರಿ ಪೂರ್ಣಗೊಳಿಸಬೇಕು. ಅಲ್ಲದೇ ಈವರೆಗೆ ನಡೆದ ಕಾಮಗಾರಿ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಿ, ಜನರಿಗೆ ತಿಳಿಸಬೇಕೆಂದು ಆಗ್ರಹಿಸಿದರು.

ಇನ್ನೂ ಇದೆ ಸಂದರ್ಭದಲ್ಲಿ ಕಳಪೆ ಕಾಮಗಾರಿ ಮಾಡಲಾಗಿದೆ ಎಂದು ಪ್ರತಿಭಟನೆ ಮಾಡಿದ ವೇಳೆಯಲ್ಲಿ, ನೀರಾವರಿ ಇಲಾಖೆ ಅಧಿಕಾರಿಗಳು ಮತ್ತು ರೈತರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಕೂಡಲೇ ಕಾಮಗಾರಿ ಪೂರ್ಣಗೊಳಿಸುವಂತೆ ರೈತರು ಆಗ್ರಹಿಸಿದರು....

Edited By :
Kshetra Samachara

Kshetra Samachara

01/10/2020 04:06 pm

Cinque Terre

13.93 K

Cinque Terre

0

ಸಂಬಂಧಿತ ಸುದ್ದಿ