ಧಾರವಾಡ: ಪಶ್ಚಿಮ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಅವರು ಬುಧವಾರ ರಾಣೆಬೆನ್ನೂರು, ಬ್ಯಾಡಗಿ, ರಟ್ಟಿಹಳ್ಳಿಗಳಲ್ಲಿ ಪ್ರಚಾರ ನಡೆಸಿದರು.
ಬ್ಯಾಡಗಿಯಲ್ಲಿ ಗುರಿಕಾರ ಅವರಿಗೆ ಪದವೀಧರರು ಹಾಗೂ ವಕೀಲರು ಆತ್ಮೀಯವಾಗಿ ಸನ್ಮಾನಿಸಿದರು. ಈ ವೇಳೆ ಬಸವರಾಜ ಗುರಿಕಾರ ಅವರು ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಇತ್ತ ರವಿಕುಮಾರ ಜಮಖಂಡಿ ಅವರ ತಂಡವು ಕಾರವಾರ ಜಿಲ್ಲೆಯ ವಿವಿಧ ತಾಲೂಕು ಹಾಗೂ ಗ್ರಾಮಗಳಲ್ಲಿ ಪ್ರಚಾರ ಕಾರ್ಯವನ್ನು ಮಾಡಿತು.
ಎ.ಕೆ.ಮುಧೋಳ, ಧರ್ಮಪ್ಪ ಕಂಬಳಿ ಅವರನ್ನೊಳಗೊಂಡ ತಂಡವು ಗದಗ ಜಿಲ್ಲೆಯ ರೋಣ ತಾಲೂಕು ಹಾಗೂ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಪ್ರಚಾರ ಕಾರ್ಯವನ್ನು ಮಾಡಿದರು.
ಶಂಕರ ಸಾವೂರ, ಶಿವರಾಜ ಕರಿಗಾರ, ಯಲ್ಲಪ್ಪ ಜಿರಗೋಡ, ಪ್ರಕಾಶ ಮುಗದ, ಮಂಜುನಾಥ ಹಂಚಿನಮನಿ, ಕಲ್ಮೇಶ ಮುಗದ,
ಸಂಗಮೇಶ ಕುಂಬಾರ, ಸುರೇಶ್ ಕುಂಬಾರ ಗಣೇಶ ಜಿರಗೋಡ, ಸೋಮೇಶ ಹಂಚಿನಮನಿ, ಜಗದೀಶ ಜಿರಗೋಡ, ಆಕಾಶ ಜಿರಗೋಡ ಅವರು ಹಾವೇರಿ ಜಿಲ್ಲೆ ಹಾಗೂ ಧಾರವಾಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಗುರಿಕಾರ ಅವರ ಪರವಾಗಿ ಪ್ರಚಾರ ಮಾಡಿದರು.
ಆನಂದ ಹಾರಿಕೊಪ್ಪ ಅವರ ತಂಡವು ಅಮ್ಮಿನಭಾವಿ ಹಾಗೂ ಇತರ ಗ್ರಾಮೀಣ ಭಾಗದಲ್ಲಿ ಪ್ರಚಾರ ಕಾರ್ಯವನ್ನು ಮಾಡಿತು. ಗ್ರಾಮೀಣ ಭಾಗದ ಪದವೀಧರರಿಂದ ಉತ್ತಮ ಪ್ರತಿಕ್ರಿಯೆ ದೊರೆಯಿತು.
ಕುಂದಗೋಳ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರಾಘು ನರಗುಂದ, ನಾಗರಾಜ ಉಣಕಲ್ ಅವರ ತಂಡವು ಪ್ರಚಾರ ಕಾರ್ಯ ಮಾಡಿತು.
Kshetra Samachara
14/10/2020 09:04 pm