ಹುಬ್ಬಳ್ಳಿ: ರಾಜ್ಯ ಸರ್ಕಾರದಲ್ಲಿ ಅಧಿಕಾರದ ಅತಿವೃಷ್ಟಿ ಪ್ರಾರಂಭವಾಗಿದೆ ಎಂದು ಮಾಜಿ ಶಾಸಕ ಕೋನರೆಡ್ಡಿ ಲೇವಡಿ ಮಾಡಿದ್ದಾರೆ.
ರಾಜ್ಯದಲ್ಲಿ ಅತಿವೃಷ್ಟಿ ಆಗಿದ್ದರೆ ಸರ್ಕಾರದಲ್ಲಿ ಅಧಿಕಾರದ ಅತಿವೃಷ್ಟಿ ಪ್ರಾರಂಭವಾಗಿದೆ. ನಿನ್ನೆ ಇಬ್ಬರ ಸಚಿವರನ್ನು ರಾಜಿಮಾಡಿ ಶ್ರೀರಾಮಲು ಅವರ ಆರೋಗ್ಯ ಖಾತೆಯನ್ನು ಸಚಿವ ಸುಧಾಕರ್ ಅವರಿಗೆ ಕೊಟ್ಟಿದ್ದಾರೆ.
ಶ್ರೀರಾಮಲು ಪದೆ ಪದೆ ಹೇಳುತ್ತಿದ್ದರು ನಮ್ಮಲ್ಲಿ ಹೊಂದಾಣಿಕೆ ಇಲ್ಲಾ ಎಂದು ಆದ್ದರಿಂದ ಇಡಿ ರಾಜ್ಯದ ಜನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಶ್ರೀರಾಮಲು ಅವರು ಉಪಮುಖ್ಯ ಮಂತ್ರಿ ಕನಸು ಕಾಣುತ್ತಿದ್ದಾರೆ ಅವರ್ ಖಾತೆಯನ್ನು ಬದಲಾವಣೆ ಮಾಡಿ ಅವರು ಸಮರ್ಥರಿಲ್ಲ ಎಂದು ವ್ಯವಸ್ತೆಯನ್ನು ತೊರಿಸಿಕೊಟ್ಟರು. ಅಂತಹ ಒಳ್ಳೇ ಸಚಿವರಿಗೆ ಈರೀತಿ ಆಗಿದೆ. ಸಮಾಜ ಕಲ್ಯಾಣ ಇಲಾಖೆ ಮೊದಲೆ ಕಾಲಿ ಇತ್ತು .
ಖಾತೆಯನ್ನು ಬದಲಾವಣೆ ಮಾಡುವ ಮೂಲಕ ಬಿಜೆಪಿ ಯಲ್ಲಿ ಅಧಿಕಾರಕ್ಕಾಗಿ ಅತಿವೃಷ್ಟಿ ಆಗಿದೆ ಎಂದು ಲೇವಡಿ ಮಾಡಿದರು.
Kshetra Samachara
14/10/2020 01:26 pm