ಧಾರವಾಡ: ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿಮೇಳ ಆರಂಭಗೊಂಡು ಇಂದಿಗೆ ಮೂರು ದಿನ ಕಳೆದಿದೆ. ಈ ಬಾರಿ ಕೃಷಿ ಮೇಳ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ಶ್ವಾನಯೊಂದು ರಕ್ತದಾನ ಮಾಡುವ ಮೂಲಕ ಇನ್ನೊಂದು ಶ್ವಾನದ ಜೀವ ಉಳಿಸಿದೆ.
ಹೌದು! ಧಾರವಾಡದ ಕೃಷಿ ಮೇಳದಲ್ಲಿ ಮಾಯಾ ಹೆಸರಿನ ಶ್ವಾನಕ್ಕೆ ಚಾರ್ಲಿ ಎಂಬ ಶ್ವಾನ ರಕ್ತದಾನ ಮಾಡಿ ಜೀವ ಉಳಿಸಿದೆ. ಚಾರ್ಲಿ ಶ್ವಾನದಿಂದ ರಕ್ತದಾನ ಮಾಡಿಸಿ ಮಾಲೀಕ ಸೋಮಶೇಖರ್ ಮಾನವೀಯತೆ ಮೆರೆದಿದ್ದಾರೆ. ಏರ್‌ಪೋರ್ಟ್ ಭದ್ರತೆಯಲ್ಲಿದ್ದ ಮಾಯಾ ಎಂಬ ಹೆಸರಿನ ಶ್ವಾನಕ್ಕೆ ರಕ್ತ ಬೇಕಾಗಿತ್ತು. ವೈದ್ಯರ ಕರೆಯ ಮೇರೆಗೆ ಬಂದು ಚಾರ್ಲಿ ಎಂಬ ಹೆಸರಿನ ಶ್ವಾನದ ಮಾಲೀಕರು ರಕ್ತದಾನ ಮಾಡಿಸಿದ್ದಾರೆ.
ಚಾರ್ಲಿ ಹೆಸರಿನ ಈ ಮೂಕ ಪ್ರಾಣಿ ರಕ್ತದಾನ ಮಾಡುವ ಮೂಲಕ ಮಾಯಾ ಜೀವ ಉಳಿಸಿದೆ.
Kshetra Samachara
19/09/2022 12:02 pm