ಅಣ್ಣಿಗೇರಿ: ಪಟ್ಟಣದ ಜನರಿಗೆ 24×7 ಕುಡಿಯುವ ನೀರನ್ನು ವದಗಿಸುವ ಬಹುದೊಡ್ಡ ಕನಸು ಇಂದು ಯಶಸ್ವಿಯಾಗಿದೆಸದ್ಯ ಪ್ರತಿದಿನ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಶಾಸಕ ಕೋನರಡ್ಡಿ ಹೇಳಿದರು.
ಅವರು ಪಟ್ಟಣದ ಪುರಸಭೆ ಸಭಾಭವನದಲ್ಲಿ ನಡದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ,ಪಟ್ಟಣದ ಜನರು ಮೊದಲು ನೀರಿನ ಸಮಸ್ಯೆಯನ್ನು ಎದರುಸುತ್ತಿದ್ದರು. ಆದರೆ ಇಂದು ಅಣ್ಣಿಗೇರಿ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಸರಬರಾಜು ವ್ಯವಸ್ಥೆಯನ್ನು ಕಲ್ಪಿಸುವುದರಜೊತೆಗೆ 24x7ನಿರಂತರ ನೀರು ಪೂರೈಕೆ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗಿದೆ.
ಜನರಿಗೆ ಪ್ರತಿದಿನ ನೀರು ಸರಬರಾಜು ಮಾಡುವಲ್ಲಿ ದೇಶದಲ್ಲಿ 3ನೇ ಪಟ್ಟಣವಾಗಿದೆ ಎಂದರು.ಕರ್ನಾಟಕ ಸರಕಾರವು ಪಟ್ಟಣಕ್ಕೆ 24x7ನಿರಂತರ ಕುಡಿಯುವ ನೀರು ಸರಬರಾಜು ಯೋಜನೆಯನ್ನು 54.00 ಕೋಟಿಗಳ ಅಂದಾಜಿಗೆ 2021ರಲ್ಲಿ ಆಡಳಿತಾತ್ಮಕ ಅನುಮೋದನೆಗೆ ನೀಡಿತ್ತು.ಯೋಜನೆಯನ್ನು 2023ರಂದು ಪೂರ್ಣಗೊಳಿಸಿಚಾಲನೆಗೊಳಿಸಲಾಗಿದೆ.
24x7ನಿರಂತರ ನೀರು ಸರಬರಾಜು ಯೋಜನೆಯನ್ನು ಪ್ರಾಯೋಗಿಕವಾಗಿ ಅಗಸ್ಟ್ 2023ರಿಂದ ಪ್ರಾರಂಭಿಸಿ ನವೆಂಬರ್ 2023 ರಿಂದ ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿತ್ತು ಆದರೆ 28.11.2024 ರಿಂದ ಪಟ್ಟಣಕ್ಕೆ 24x7 ನಿರಂತರ ನೀರು ಪೂರೈಕೆ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಚಾಲನೆಗೊಳಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯ ಅಧಿಕಾರಿ ವೈ.ಜಿ ಗದ್ದಿಗೌಡರ, ಕರ್ನಾಟಕ ಜಲ ಮಂಡಳಿಯ ಸಹಾಯಕ ಅಭಿಯಂತರ ಶಿವಾನಂದ್ ಹಿಂಡಸಗೇರಿ, ತಹಶೀಲ್ದಾರ್ ಮಂಜುನಾಥ್ ದಾಸಪ್ಪನವರ್, ಸ್ಥಾಯಿ ಸಮಿತಿ ಅಧ್ಯಕ್ಷ ರೆಹಮಾನಸಾಬ್ ಹೊರಗಿನಮನಿ ಹಾಗೂ ಪುರಸಭೆ ಸದಸ್ಯರು ಉಪಸ್ಥಿತರಿದ್ದರು.
Kshetra Samachara
01/12/2024 09:55 am