ಅಣ್ಣಿಗೇರಿ: ಅತಿ ಮಳೆಯಿಂದಾಗಿ ಅಣ್ಣಿಗೇರಿ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮಗಳಲ್ಲಿ ರೈತರ ಒಡ್ಡುಗಳು ಒಡೆದು ಮತ್ತು ಬೆಳೆ ಸಂಪೂರ್ಣ ಹಾಳಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಭದ್ರಾಪುರ ಗ್ರಾಮದ ಹಳ್ಳ ತುಂಬಿ ಹರಿಯುತ್ತಿರುವುದರಿಂದ ಗ್ರಾಮ ಸೇರಿದಂತೆ ಅಕ್ಕಪಕ್ಕ ಜಮೀನುಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿ ಒಡ್ಡುಗಳು ಹೊಡೆದು ರೈತನಿಗೆ ತುಂಬಲಾರದ ನಷ್ಟವಾಗಿದೆ.
ಈ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಅಂಗಡಿ ಅವರ ನೇತೃತ್ವದಲ್ಲಿ ಅಣ್ಣಿಗೇರಿ ತಾಲೂಕು ದಂಡಾಧಿಕಾರಿ ಅವರಿಗೆ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದ ಅವರು. ತಾಲೂಕು ಆಡಳಿತ ತಕ್ಷಣವೇ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡ ಬೇಕು ಭದ್ರಾಪುರ ಗ್ರಾಮದ ಹಳ್ಳದ ಹತ್ತಿರ ನಿರ್ಮಿಸಲಾದ ಚಕ್ಕ ಡ್ಯಾಮನ್ನು ನೆಲಸಮ ಮಾಡಬೇಕು ಹಾಗೂ ತಕ್ಷಣವೇ ಸರ್ಕಾರ ಪರಿಹಾರ ನೀಡಬೇಕು ಇಲ್ಲದೇ ಹೋದಲ್ಲಿ ಎರಡು ಮೂರು ದಿನಗಳ ನಂತರ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ವೇಳೆ ನಾರಾಯಣ ಮಾಡಳ್ಳಿ, ಮಂಜುನಾಥ್ ಗಾಣಿಗೇರ್, ಉಳವಪ್ಪ ಹಿರಶಡ್ಡಿ, ಬಸವರಾಜ ಹಾದಿಮನಿ, ಈಶಪ್ಪ ಹಂಚಿ, ಮಲ್ಲಪ್ಪ ಗುಡ್ಡದ, ಬಿ ಕಾಲ ನವರ್, ಅಸ್ಪಕ್ ಖುದಾವಂದ, ವೀರೇಶ್ ಕುಂಬಾರ್, ಯಲ್ಲಪ್ಪ ಸಂದೀಗೋಡ, ಗಂಗಪ್ಪ ನಾಗರಹಳ್ಳಿ, ರಂಜಾನ್ ಅಬ್ಬಿಗೇರಿ, ಗುಳ್ಳಪ್ಪ ಹಬ್ಬ ನವರ್, ದಸ್ ಗಿರ್ ಸಾಬ್ ಸಂಕಟಿ, ಕೃಷ್ಣ ಹಂಚಿ, ಸಂಗಪ್ಪ ಅಂಗಡಿ, ಶರಣಪ್ಪ ಗುಡ್ಡದ, ಮಹಿಬೂಬ್ ಮೊದ ನಾಯ್ಕರ್, ಖಾದ್ರಿ ಸಾಬ್ ಖುದಾವಂದ ಮತ್ತು ಅಕ್ಕಪಕ್ಕದ ಹಳ್ಳಿಯ ರೈತರು ಉಪಸ್ಥಿತರಿದ್ದರು
Kshetra Samachara
08/09/2022 11:20 am