ನವಲಗುಂದ : ನವಲಗುಂದ ಪಟ್ಟಣದ ಗವಿಮಠ ಓಣಿಯಲ್ಲಿ ಸೋಮವಾರ ತಡರಾತ್ರಿ ಮನೆಯೊಂದರಲ್ಲಿ ನಾಗರಹಾವು ಕಾಣಿಸಿಕೊಂಡ ಹಿನ್ನೆಲೆ ಮನೆಯವರು ಕೊಂಚ ಗಾಬರಿಗೆ ಒಳಗಾಗಿ, ಉರಗ ತಜ್ಞರಿಗೆ ಕರೆಯಿಸಲಾಯಿತು.
ಹೌದು ಪಟ್ಟಣದ ಗವಿಮಠ ಓಣಿಯ ನಿವಾಸಿ ಮಹಾಂತೇಶ್ ದಂಡಾವತಿಮಠ ಎಂಬುವವರ ಮನೆಗೆ ಸದ್ದಿಲ್ಲದೇ ಎಂಟ್ರಿ ಕೊಟ್ಟ ನಾಗಪ್ಪನನ್ನು ಕಂಡು ಮನೆಯವರು ಗಾಬರಿಗೋಳಗಾಗಿದ್ದರು. ನಂತರ ನವಲಗುಂದದವರೇ ಆದ ಉರಗ ತಜ್ಞ ಪ್ರಕಾಶ್ ಚಿಗರಿಯವರಿಗೆ ವಿಷಯ ತಿಳಿಸಲಾಯಿತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಅವರು ನಾಗರಾಜನನ್ನು ಹಿಡಿದು ಸುರಕ್ಷಿತವಾಗಿ ಊರಾಚೆ ಬಿಡಲಾಯಿತು.
Kshetra Samachara
02/11/2021 02:29 pm