ಧಾರವಾಡ: ವಿವಿಧೋದ್ದೇಶ ಪುನರ್ವಸತಿ, ಗ್ರಾಮೀಣ ಪುನರ್ವಸತಿ ಹಾಗೂ ನಗರ ಪುನರ್ವಸತಿ ಕಾರ್ಯಕರ್ತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ವಿಕಲಚೇತನರ, ವಿವಿಧೋದ್ದೇಶ ಹಾಗೂ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಒಕ್ಕೂಟದಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ವಿವಿಧೋದ್ದೇಶ ಗ್ರಾಮೀಣ ಮತ್ತು ನಗರ ಪುನರ್ವಸತಿ ಕಾರ್ಯಕರ್ತರ ಕ್ಷೇಮಾಭಿವೃದ್ಧಿ ಅಧಿನಿಯಮ ಜಾರಿಗೊಳಿಸಿ ಕರ್ತವ್ಯ ನಿರ್ವಹಿಸುತ್ತಿರುವ ಎಂಆರ್ ಡಬ್ಲು ಅವರನ್ನು ತಾಲೂಕಾ ಅಂಗವಿಕಲ ಅಧಿಕಾರಿಯನ್ನಾಗಿ ಪಿಆರ್ ಡಬ್ಲು ರವರನ್ನು ಗ್ರಾಮ ಮಟ್ಟದ ಅಭಿವೃದ್ದಿ ಸಹಾಯಕರನ್ನಾಗಿ ಹಾಗೂ ಯುಆರ್ ಡಬ್ಲು ಅವರನ್ನು ನಗರ ವಿಕಲಚೇತನರ ಅಭಿವೃದ್ಧಿ ಸಹಾಯಕರನ್ನಾಗಿ ಹುದ್ದೆಗಳನ್ನು ಸೃಜಿಸಿ ಕಾಯಂಗೊಳಿಸಬೇಕು. ವಯೋ ನಿವೃತ್ತರಾಗುವ ನೌಕರರಿಗೆ 25 ಲಕ್ಷ ಇಡುಗಂಟು ನೀಡಬೇಕು, 13-14 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಎಂಆರ್ ಡಬ್ಲು, ವಿಆರ್ ಡಬ್ಲು ಹಾಗೂ ಯುಆರ್ ಡಬ್ಲು ಅವರನ್ನು ಕಾಯಂಗೊಳಿಸಬೇಕು. ಆಕಸ್ಮಿಕ ದುರ್ಘಟನೆಗಳಾಗಿ ಮರಣ ಹೊಂದುವ 25-30 ಲಕ್ಷದವರೆಗೆ ಪರಿಹಾರ ನೀಡಬೇಕು, ಕೊರೊನಾ ವಾರಿಯರ್ಸಗಳಿಗೆ ನೀಡುವ ಮರಣ ಪರಿಹಾರ ಧನವನ್ನೂ ತಮಗೂ ನೀಡಬೇಕು ಹಾಗೂ ವಿಕಲಚೇತನರ ಮಾಶಾಸನವನ್ನು 5 ಸಾವಿರದವರೆಗೆ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು.
Kshetra Samachara
04/02/2021 02:44 pm