ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಎಫ್.ಡಿ.ಎ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ: ಉನ್ನತ ತನಿಖೆಗಾಗಿ ಎಬಿವಿಪಿ ಆಗ್ರಹ

ಧಾರವಾಡ : ಕರ್ನಾಟಕ ಲೋಕಸೇವಾ ಆಯೋಗದ ಪ್ರಥಮ ದರ್ಜೆ ಸಹಾಯಕ ಹುದ್ದೆ ನೇಮಕಾತಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿರುವುದನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಖಂಡಿಸುತ್ತದೆ.ಈ ಕೂಡಲೇ ಉನ್ನತ ಮಟ್ಟದಲ್ಲಿ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ನಗರದ ಸಪ್ತಾಪುರ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದರು..

ಪ್ರಶ್ನೆ ಪತ್ರಿಕೆಗಳು ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಏರಿಕೆಯಾಗುವುದು ಮತ್ತು ಭ್ರಷ್ಟಾಚಾರ ನಡೆಯುವುದು ಸಾಮಾನ್ಯವಾಗಿದೆ ಇತ್ತೀಚೆಗಷ್ಟೇ ತಾಲೂಕಿನಿಂದ ಒಂದೇ ಪರೀಕ್ಷಾ ಕೇಂದ್ರದಿಂದ ಕೆಪಿಎಸ್ಸಿ ನಡೆಸುವ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು ಆಯ್ಕೆಯಾಗಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದೆ ಆದರೆ ರಾಜ್ಯದಲ್ಲಿ ಇಂತಹ ಕ್ರಮಗಳು ಮತ್ತು ಭ್ರಷ್ಟಾಚಾರಗಳು ಕೆಪಿಎಸ್ಸಿಯಲ್ಲಿ ಮೇಲಿಂದ ಮೇಲೆ ನಡೆಯುತ್ತಿದ್ದರೂ ಇದಕ್ಕೆ ಕಡಿವಾಣ ಹಾಕುವ ಯಾವುದೇ ಉಪಾಯಗಳನ್ನು ಕಂಡುಹಿಡಿದಿಲ್ಲ, ಪದೇಪದೇ ಪ್ರಶ್ನೆಪತ್ರಿಕೆಗಳು ಸೋರಿಕೆ ಯಾವುದರಿಂದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಮನೋಬಲ ಕೂಗಿ ಕೆಪಿಎಸ್ಸಿ ಮೇಲಿರುವ ಭರವಸೆಯನ್ನು ಕಳೆದುಕೊಳ್ಳುವಂತಾಗಿದೆ.

ಈ ಜಾಲದ ಹಿಂದೆ ಇನ್ನು ಎಷ್ಟು ಕಾಣದ ಕೈಗಳು ಅಡಗಿವೆ ಎಂಬುದನ್ನು ಉನ್ನತ ಮಟ್ಟದಲ್ಲಿ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಮತ್ತು ಪರೀಕ್ಷೆಗಳಿಗೆ ಸಂಬಂಧಪಟ್ಟ ವ್ಯವಹಾರಗಳು ಮತ್ತೊಮ್ಮೆ ಮರುಕಳಿಸದಂತೆ ನೋಡಿಕೊಳ್ಳಲು ಸರಕಾರಕ್ಕೆ ಅಭಾವಿಪ ಆಗ್ರಹಿಸಿದರು.

ಈ ವೇಳೆ ಗಗನ್ ಇಳಿಗೆರ್,ಪ್ರತೀಕ್ ಮಾಳಿ, ಶಿವಾನಂದ್ ಕಂಟಿಕಾರ್,ಸುಬೋಧ್ ಸಂಕೃದ್ದಿ ಸಿದ್ದಾರ್ಥ ಹುದ್ದಾರ, ಅರುಣ್ ಅಮರಗೋಳ

ಕಾರ್ತಿಕ್ ಇಂಗಳಗಿ, ಸುಶಾಂತ್ ಪಾಟೀಲ್ ಸೇರಿದಂತೆ ಇತರರು ಇದ್ದರು.

Edited By : Manjunath H D
Kshetra Samachara

Kshetra Samachara

24/01/2021 03:00 pm

Cinque Terre

25.21 K

Cinque Terre

0

ಸಂಬಂಧಿತ ಸುದ್ದಿ