ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಪಾಲಿಕೆ ಪೌರಕಾರ್ಮಿಕರಿಗೆ ಗುತ್ತಿಗೆದಾರನ ಕಿರುಕುಳ: ಆತ್ಮಹತ್ಯೆಗೆ ಯತ್ನ

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಗುತ್ತಿಗೆದಾರನ ಕಿರುಕುಳಕ್ಕೆ ಬೇಸತ್ತು ನೇರವೇತನ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದ್ದ ಪೌರಕಾರ್ಮಿಕ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.

ಮಂಜುಳಾ ಮಾದರ ಎಂಬುವ ಮಹಿಳೆಯೇ ಆತ್ಮಹತ್ಯೆಗೆ ಯತ್ನಿಸಿದ್ದು,ಗುತ್ತಿಗೆದಾರನ ಕಿರುಕುಳದಿಂದ ನೋವನ್ನು ಅನುಭವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದೇ ಎಂದು ಮಹಿಳೆಯೇ ಮಾಧ್ಯಮದ ಮುಂದೆ ಕಣ್ಣೀರು ಹಾಕಿದ್ದಾಳೆ.

ಇನ್ನೂ 19ನೇ ವಾರ್ಡಿನ ಗುತ್ತಿಗೆದಾರ ನರಸಿಂಹ ಸಬಗಲ್ ಎಂಬುವವರ ಕಿರುಕುಳಕ್ಕೆ ಬೇಸತ್ತಿರುವುದಾಗಿ ಮಹಿಳೆಯು ಆರೋಪಿಸಿದ್ದಾರೆ.ಈ ಕುರಿತು ಪ್ರಕರಣ ದಾಖಲಿಸಿಕೊಂಡ ಧಾರವಾಡ ಉಪನಗರ ಪೊಲೀಸ್ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Edited By : Manjunath H D
Kshetra Samachara

Kshetra Samachara

13/01/2021 06:58 pm

Cinque Terre

34.83 K

Cinque Terre

4

ಸಂಬಂಧಿತ ಸುದ್ದಿ