ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯ ಸಿದ್ಧಾರೂಢರ ಮಠದಲ್ಲಿ ಸಮನ್ವಯ ಸಮತಿ ಸಭೆ 

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ನಾಗರಿಕರ ವಾರ್ಡ್ ಸಮಿತಿ ರಚನೆ ಅಭಿಯಾನ ವೇದಿಕೆಯಿಂದ ನಗರದ ಸಿದ್ಧಾರೂಢ ಮಠದಲ್ಲಿ ಮೊಟ್ಟಮೊದಲ ನಾಗರಿಕರ ಸಮನ್ವಯ ಸಮಿತಿ ಸಭೆ ಜರುಗಿತು.

ಪಾಲಿಕೆಯ ಜನಪ್ರತಿನಿಧಿಗಳು, ಪರಿಷತ್ ಮತ್ತು ಹಿರಿಯ ಅಧಿಕಾರಿಗಳ ಮನವಲಿಸಿ, ಕೂಡಲೇ ನಾಗರಿಕರ ವಾರ್ಡ್ ಸಮಿತಿ ರಚಿಸುವಂತೆ ನಿರಂತರ ಒತ್ತಡ ಹೇರಲು ಸರ್ವಾನುಮತದಿಂದ ನಿರ್ಣಯಿಸಲಾಯಿತು. 

ಈಗಾಗಲೇ ಕರ್ನಾಟಕದ ವಿವಿಧ ಮಹಾನಗರ ಪಾಲಿಕೆಗಳ ನಾಗರಿಕರು ತಮ್ಮ ನಗರಗಳಲ್ಲಿಯೂ ಸಹ ನಾಗರಿಕರ ವಾರ್ಡ್ ಸಮಿತಿ ರಚನೆಗಾಗಿ ಒತ್ತಾಯಿಸಲು  ವಾರ್ಡ್ ಸಮಿತಿ ಬಳಗ ರಚಿಸಿಕೊಂಡಿರುವುದರಿಂದ ನಮ್ಮ ಹುಬ್ಬಳ್ಳಿ ಧಾರವಾಡದ ನಾಗರಿಕರ ವೇದಿಕೆಯನ್ನು ಸಹ ಇತರೆ ಮಹಾನಗರಗಳ ನಾಗರಿಕರಂತೆ ಹುಬ್ಬಳ್ಳಿ-ಧಾರವಾಡ ವಾರ್ಡ್ ಸಮಿತಿ ಬಳಗ ಎಂದು ಮರುನಾಮಕರಣ ಮಾಡಲು ನಿರ್ಣಯಿಸಲಾಯಿತು.

 ನಿವೃತ್ತ ಪ್ರಾಚಾರ್ಯರಾದ ಪ್ರೊಫೆಸರ್ ಧೋತ್ರದ,    ವೆಂಕನಗೌಡ ಪಾಟೀಲ್,  ಶಿವಶಂಕರಪ್ಪ ಮೂಗಬಸ್ತ,  ಸಾರಾ ಗೋಕಾವಿ,   ಲಿಂಗರಾಜ್ ಧಾರವಾಡ ಶೆಟ್ಟರ್,      ಮಲ್ಲಿಕಾರ್ಜುನ್ ಚೆನ್ನಶೆಟ್ಟಿ ಉಪಸ್ಥಿತರಿದ್ದರು.

ಸಮನ್ವಯ ಸಮಿತಿಯ ವಿವಿಧ ಪದಾಧಿಕಾರಿಗಳ ಪಟ್ಟಿಯನ್ನು ಸಭೆಯಲ್ಲಿ ಚರ್ಚಿಸಿ  ತೀರ್ಮಾನಿಸಲಾಯಿತು.   

Edited By : PublicNext Desk
Kshetra Samachara

Kshetra Samachara

15/07/2022 07:16 pm

Cinque Terre

9.57 K

Cinque Terre

0

ಸಂಬಂಧಿತ ಸುದ್ದಿ