ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡದಲ್ಲಿ 16ನೇ ಸಾಂಖ್ಯಿಕ ದಿನಾಚರಣೆ

ಧಾರವಾಡ: ಸಂಖ್ಯಾ ಶಾಸ್ತ್ರಜ್ಞರಾದ ಸಾಂಖ್ಯಿಕ ಪಿತಾಮಹ ಪ್ರೊ.ಪಿ.ಸಿ.ಮಹಾನಲೋಬಿಸ್‍ರವರ 129ನೇ ಜನ್ಮ ದಿನಾಚರಣೆಯ ಅಂಗವಾಗಿ 16ನೇ ಸಾಂಖ್ಯಿಕ ದಿನಾಚರಣೆಯನ್ನು ಧಾರವಾಡ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಚೇರಿಯಲ್ಲಿ ಆಚರಿಸಲಾಯಿತು.

ಉದ್ಘಾಟಕರಾಗಿ ಆಗಮಿಸಿದ ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳ ನೀತಿ ಆಯೋಗದ ಮೂಲಕ ಮಹತ್ವಾಕಾಂಕ್ಷಿಗಳ ಯೋಜನೆಗಳ ಕುರಿತು ಮಾತನಾಡಿ, ದತ್ತಾಂಶದ ಮಹತ್ವದ ಕುರಿತು ಸಭೆಯಲ್ಲಿ ಸಾಂಖ್ಯಿಕ ಸಿಬ್ಬಂದಿಗಳವರಿಗೆ ವಿಷ್ಲೇಶಿಸಿದರು.

ಕಾರ್ಯಕ್ರಮದಲ್ಲಿ ಸುಸ್ಥಿರ ಅಭಿವೃದ್ಧಿಯಲ್ಲಿ ದತ್ತಾಂಶಗಳ ಮಹತ್ವದ ವಿಷಯಾಧಾರಿತವಾಗಿ ಈ ವರ್ಷದ ಆಚರಣೆಯಲ್ಲಿ ಆಯ್ಕೆ ಮಾಡಿಕೊಳ್ಳಲಾಗಿತ್ತು.

ಅಣ್ಣಿಗೇರಿ ಸೇವಾ ಸಂಸ್ಥೆಯ ಅಧ್ಯಕ್ಷ ಹಾಗೂ ಶಿಕ್ಷಣ ತಜ್ಞ ಪ್ರೊ.ನಾಗೇಶ ಅಣ್ಣಿಗೇರಿ ಸುಸ್ಥಿರ ಅಭಿವೃದ್ಧಿಯ ಗುರಿಯಲ್ಲಿ ಒಂದಾದ ಪೌಷ್ಠಿಕತೆ ಕುರಿತು ಮಾತನಾಡಿ, ಬೀದಿ ಹೋಟೆಲ್‌ಗಳಲ್ಲಿಯ ಪೌಷ್ಠಿಕತೆಯ ಮತ್ತು ಸ್ವಚ್ಛತೆಯ ಕುರಿತು ಹಾಗೂ ಆರೋಗ್ಯದ ಮೇಲಾಗುವ ದುಷ್ಪರಿಣಾಮದ ಕುರಿತು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸಾಯಿಕುಮಾರ ಹಿಳ್ಳಿ, ಸುಸ್ಥಿರ ಅಭಿವೃದ್ಧಿ 17 ಗುರಿಗಳ ಕುರಿತು ಹಾಗೂ 6 ಕ್ಷೇತ್ರಗಳಿಗೆ ಸಂಬಂಧಿಸಿದ 49 ಸೂಚ್ಯಾಂಕಗಳ ಕುರಿತು ವಿಶ್ಲೇಷಣೆಯನ್ನು ಮಾಡಿದರು.

Edited By : PublicNext Desk
Kshetra Samachara

Kshetra Samachara

30/06/2022 06:25 pm

Cinque Terre

8.47 K

Cinque Terre

0

ಸಂಬಂಧಿತ ಸುದ್ದಿ