ಧಾರವಾಡ: ಅನೇಕ ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಬಂದಿದ್ದು, ನಿವೃತ್ತಿ ಜೀವನದಲ್ಲಿ ಸೈನ್ಯದ ಕುರಿತು ಯುವಕರಿಗೆ ತರಬೇತಿ ನೀಡುತ್ತೇವೆ ಎಂದು ಸೇನೆಯಿಂದ ನಿವೃತ್ತಿಯಾದ ಕುಂದಗೋಳ ತಾಲೂಕಿನ ಯಲಿವಾಳ ಗ್ರಾಮದ ನಿಸಾರ್ ಅಹ್ಮದ್ ಬಂಕಾಪುರ ಹೇಳಿದರು.
ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಸಮಾಜ ಸೇವಕ ನಬಿಸಾಬ್ ನಾಲಬಂದ ಅವರ ಮನೆಯಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಹೆಬ್ಬಳ್ಳಿ ಗ್ರಾಮದ ನಿವೃತ್ತ ಯೋಧ ಬಸವರಾಜ ಗಡಾದ ಅವರನ್ನೂ ಸನ್ಮಾನಿಸಲಾಯಿತು.
ಅಲ್ಲದೇ ಹಾಲಿ ಸೈನಿಕ ಯಾಸೀನ್ ಅಲಿ ಭದ್ರಾಪೂರ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಉಪ್ಪಿನ, ಶಿಕ್ಷಕರಾದ ಎಲ್.ಐ.ಲಕ್ಕಮ್ಮನವರ, ಸುರೇಶ ತಿರ್ಲಾಪುರ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿದ್ದರು.
Kshetra Samachara
02/05/2022 01:42 pm