ಧಾರವಾಡ: ಅಸ್ಪೃಶ್ಯತೆ ನಿವಾರಣೆ ಮತ್ತು ಅಂತರಜಾತಿ ವಿವಾಹದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಎಚ್.ಅನಂತರಾಯಪ್ಪ, ಬೆಂಗಳೂರು ಇವರು ನಿರ್ದೇಶಿಸಿ ನಿರ್ಮಿಸಿದ ಸಮಾನತೆಯ ಕಡೆಗೆ ಎಂಬ ಕನ್ನಡ ಚಲನಚಿತ್ರವನ್ನು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಾಯೋಜನೆ ಮಾಡಿ ಸರ್ಕಾರಿ ಟಿ.ವಿ.ಚಾನಲ್ ಆದ ಚಂದನ ವಾಹಿನಿಯಲ್ಲಿ ಡಿಸೆಂಬರ್ 19 ರಂದು ಭಾನುವಾರ ಮಧ್ಯಾಹ್ನ 2-30 ರಿಂದ 4-30 ಗಂಟೆ ಅವಧಿಯಲ್ಲಿ ಪ್ರಸಾರ ಮಾಡಲಾಗುವುದು.
ಸಾರ್ವಜನಿಕರು ಈ ಚಲನಚಿತ್ರವನ್ನು ವೀಕ್ಷಿಸಬಹುದೆಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
17/12/2021 09:38 pm