ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: 29 ರಂದು ಬೃಹತ್ ಉದ್ಯೋಗ ಮೇಳ; 2 ಸಾವಿರಕ್ಕೂ ಹೆಚ್ಚು ಉದ್ಯೋಗ ಅವಕಾಶಗಳು

ಎಸಿಸಿಪಿಎಲ್ ಟ್ರೈನಿಂಗ್ ಡಿವಿಜನ್ ಬೆಂಗಳೂರು ಹಾಗೂ ಲಕ್ಷ ಫೌಂಡೇಶನ್ ಹುಬ್ಬಳ್ಳಿಯ ಸಹಯೋಗದೊಂದಿಗೆ ನಿರುದ್ಯೋಗ ಯುವಕ ಹಾಗೂ ಯುವತಿಯರಿಗಾಗಿ ಇದೇ 29ರಂದು ಹುಬ್ಬಳ್ಳಿಯ ವಿದ್ಯಾನಗರದ ಮರಾಠ ಭವನದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಹೇಶ ಭಟ್ ಹಾಗೂ ತಿಲಕ ಅವರು ಹೇಳಿದರು.

ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಬಳಿಕ ಪಬ್ಲಿಕ್ ನೆಕ್ಸ್ಟ್ ಜೊತೆಗೆ ಮಾತನಾಡಿದ ಅವರು, ಜಿಲ್ಲೆಯ ಹಾಗೂ ಉತ್ತರ ಕರ್ನಾಟಕ ಭಾಗದ ನಿರುದ್ಯೋಗಿಗಳಿಗೆ ಸೂಕ್ತ ಉದ್ಯೋಗ ಒದಗಿಸುವ ಸದುದ್ದೇಶದಿಂದ ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ವಿದ್ಯಾವಂತ ಯುವ ಸಮುದಾಯ ಯಾವುದೇ ಕೆಲಸ ಕಾರ್ಯವಿಲ್ಲದೇ ಮನೆಯಲ್ಲಿ ನಿರುದ್ಯೋಗಿಗಳಾಗಿ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದು, ಈ ನಿಟ್ಟಿನಲ್ಲಿ ಸೂಕ್ತ ವೇದಿಕೆ ಕಲ್ಪಿಸುವ ಮೂಲಕ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ ಎಂದರು.

ಈ ಮೇಳದಲ್ಲಿ 20ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ‌. ಇದರಲ್ಲಿ ಎಂ.ಎನ್.ಸಿ, ನ್ಯಾಷನಲ್ ಹಾಗೂ ಲೋಕಲ್ ಕಂಪನಿಗಳು ಭಾಗವಹಿಸುತ್ತವೆ. ಈ ಉದ್ಯೋಗ ಮೇಳದಲ್ಲಿ ಬಹುತೇಕ ಕಂಪನಿಗಳು ನೇಮಕಾತಿ ತಕ್ಷಣವೇ ಆಫರ್ ಲೇಟರ್ ಕೂಡ ನೀಡಲಾಗುತ್ತದೆ. 2000ಕ್ಕೂ ಅಧಿಕ ಉದ್ಯೋಗಾವಕಾಶಗಳನ್ನು ಒಳಗೊಂಡಿರುವ ಈ ಉದ್ಯೋಗ ಮೇಳದಲ್ಲಿ SSLC, PUC, ITI, DIPLOMA, ANY DEGREE, MASTER DEGREE, ENGINEERING ಸೇರಿದಂತೆ ಯಾವುದೇ ವಿದ್ಯಾರ್ಹತೆ ಹೊಂದಿದವರು ಕೂಡ ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ ಎಂದು ಅವರು ಹೇಳಿದರು.

ಆಸಕ್ತ ಅಭ್ಯರ್ಥಿಗಳು ಉದ್ಯೋಗ ಮೇಳಕ್ಕೆ ಬರುವಾಗ ಐದು ಪ್ರತಿ ಬಯೋಡೇಟಾ ತೆಗೆದುಕೊಂಡು ಬರಬೇಕು ಎಂದು ಅವರು ಮನವಿ ಮಾಡಿದ್ದು, ಹೆಚ್ಚಿನ ಮಾಹಿತಿಗಾಗಿ 8123322318, 6361720207, 9620123646 ಸಂಪರ್ಕಿಸಲು ವಿನಂತಿಸಿದರು.

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

27/06/2022 12:20 pm

Cinque Terre

136.33 K

Cinque Terre

1

ಸಂಬಂಧಿತ ಸುದ್ದಿ