ಜಾತ್ರೆಯಲ್ಲಿ ಮಾಂಗಲ್ಯ ಕಳ್ಳತನ !
ಶ್ರೀ ಸಿದ್ಧಾರೂಢ ಮಠದ ಜಾತ್ರಾ ಮಹೋತ್ಸವದಲ್ಲಿ ತೆರಳಿದ್ದ ನಾಗಶೆಟ್ಟಿಕೊಪ್ಪದ ವಿಜಯಲಕ್ಷ್ಮಿ ವಾಳಿ ಎಂಬುವರ 1.80 ಲಕ್ಷ ಮೌಲ್ಯದ 40 ಗ್ರಾಮ ಮಾಂಗಲ್ಯ ಸರವನ್ನ ಖದೀಮರು ಕದ್ದಿದ್ದಾರೆ. ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
======
ಈಜು ತಂದ ಸಾವು !
ಕೆರೆಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ಸಾವನಪ್ಪಿದ ಘಟನೆ ತಾಲೂಕಿನ ಬುಡ್ನಾಳ ಗ್ರಾಮದ ಕೆರೆಯಲ್ಲಿ ನಡೆದಿದೆ. ನೇಕಾರ ನಗರದ ನಿವಾಸಿಗಳಾದ ವಿಜಯ್ ಸಿದ್ದಪ್ಪ ಕಾಂಬ್ಲೆ (25) ಹಾಗೂ ರಾಘವೇಂದ್ರ ಶಿವಪ್ಪ ತೆಗ್ಗಿನಮನಿ (24) ಎಂಬುವವರು ಮೃತರು ಎಂದು ತಿಳಿದು ಬಂದಿದೆ. ಈ ಘಟನೆ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
======
ಮಣಕವಾಡ 'ಅಜ್ಜನ ಸಂಭ್ರಮ'ಕ್ಕೆ ಚಾಲನೆ
ಅಣ್ಣಿಗೇರಿ ತಾಲೂಕಿನ ಮಣಕವಾಡದ ಶ್ರೀ ಗುರು ಅನ್ನದಾನೇಶ್ವರ ದೇವಮಂದಿರದ ಮಹಾ ತಪಶ್ವಿ ಲಿಂಗೈಕ್ಯ ಮೃತ್ಯುಂಜಯ ಅಜ್ಜನವರ ಸಂಭ್ರಮ ಅದ್ಧೂರಿಯಾಗಿ ಆರಂಭಗೊಂಡಿದೆ. ಪ್ರದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಅಬ್ದುಲ್ ಖಾದರ್ ನಡಕಟ್ಟಿನ ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.
======
ಗೃಹ ರಕ್ಷದ ಸಿಬ್ಬಂದಿಗೆ ಸಿಎಂ ಚಿನ್ನದ ಪದಕ
ದಶಕಗಳಿಂದಲೇ ಗೃಹ ರಕ್ಷದಳದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರೋ ವಿಜಯಕುಮಾರ್ ಕರ್ಜಗಿ ಹಾಗೂ ಆನಂದ್ ಶಿರಹಟ್ಟಿ ಅವರು ಸಿಎಂ ಚಿನ್ನದ ಪದಕಕ್ಕೆ ಆಯ್ಕೆ ಆಗಿದ್ದಾರೆ. ಅಳ್ನಾವರದ ಗೃಹ ರಕ್ಷಕ ದಳದ ತಾಲೂಕು ಪ್ರಭಾರ ಘಟಕಾಧಿಕಾರಿ ಎಂ.ಕೆ ಜಾಧವ್ ನೇತೃತ್ವದಲ್ಲಿ ಅಳ್ನಾವರ ತಾಲೂಕು ಕ್ರೀಡಾಂಗಣದಲ್ಲಿ ಇವರಿಗೆ ಸನ್ಮಾನ ಮಾಡಲಾಗಿದೆ.
=========
ಸುರಕ್ಷಿತವಾಗಿ ಅಮ್ಮನ ಮಡಿಲು ಸೇರಿದ ಚೈತ್ರಾ
ಯುದ್ಧಪೀಡಿತ ಉಕ್ರೇನ್‌ನಿಂದ ಕುಂದಗೋಳದ ಚೈತ್ರಾ ಸಂಶಿ ತಾಯ್ನಾಡಿಗೆ ಬಂದು ಸುರಕ್ಷಿತವಾಗಿ ತಾಯಿಯ ಮಡಿಲು ಸೇರಿದ್ದಾರೆ. ಮಗಳ ಆಗಮನಕ್ಕೆ ಪೋಷಕರು ಸಂತೋಷಪಟ್ಟಿದ್ದಾರೆ. ಯರಗುಪ್ಪಿ ಗ್ರಾಮ ಪಂಚಾಯಿತಿಯಿಂದಲೂ ಚೈತ್ರಾಗೆ ಅಭಿನಂದನಾ ಸಮಾರಂಭ ಏರ್ಪಡಿಸಿ, ಉಕ್ರೇನ್‌ನಲ್ಲಿ ಆದ ಅನುಭವ ಹಂಚಿಕೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು.
=======
ಕುರಿಗಾಹಿ ಮಹಿಳೆ ಸಾವಿಗೆ ನ್ಯಾಯ ಕೊಡಿ ?
ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಕಾಮಾಂಧರಿಂದ ಅತ್ಯಾಚಾರಕ್ಕೆ ಒಳಗಾಗಿ, ಕೊಲೆಯಾದ ಕುರಿಗಾಹಿ ಮಹಿಳೆ ಸಾವಿಗೆ ನ್ಯಾಯವೇ ಸಿಗುತ್ತಿಲ್ಲ. ಇದನ್ನ ವಿರೋಧಿಸಿ ಕುರುಬ ಸಮಾಜ ಸೇರಿದಂತೆ ಹಲವು ಸಮಾಜದವರು ಬೃಹತ್ ಹೋರಾಟ ಮಾಡುತ್ತಿದ್ದಾರೆ. ವಿಧಾನಸೌಧ ಚಲೋ ಮೂಲಕ ಈಗ ನ್ಯಾಯ ಕೇಳೋಕೆ ಸಜ್ಜಾಗಿದ್ದಾರೆ.
======
ಕಿಡಿಗೇಡಿಗಳ ವಿಕೃತಿಗೆ ರೈತರ ಬಣವಿ ಭಸ್ಮ
ರೈತರು ಸಂಗ್ರಹಿಸಿಟ್ಟಿದ್ದ ಸೋಯಾಬೀನ್ ಬೆಳೆ ಹಾಗೂ ಮೇವಿನ ಬಣವಿಗೆ ದುಷ್ಕರ್ಮಿಗಳು ರಾತ್ರೋ ರಾತ್ರಿ ಬೆಂಕಿ ಇಟ್ಟು ವಿಕೃತ ಮೆರೆದ ಘಟನೆ ಕುಂದಗೋಳ ಸಮೀಪದ ತೀರ್ಥ ಗ್ರಾಮದಲ್ಲಿ ನಡೆದಿದೆ. ಈ ಕುರಿತು ಕುಂದಗೋಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ತನಿಖೆ ಮುಂದುವರೆದಿದೆ.
=======
ಸಿನಿಮೀಯ ರೀತಿಯಲ್ಲಿ ಗಂಧದ ಮರ ಕದ್ದ ಕಳ್ಳರು !
ಧಾರವಾಡ ಜಿಲ್ಲೆಯಲ್ಲಿ ಗಂಧದ ಮರ ಕದಿಯೋರ ಸಂಖ್ಯೆ ಹೆಚ್ಚಾಗುತ್ತಿದೆ. ಮೊನ್ನೆ ಡಿಸಿ ಮನೆಯ ಆವರಣದಲ್ಲಿ ಕೂಡ ಗಂಧದ ಮರವನ್ನ ಕಳ್ಳರು ಕದಿದ್ದರು. ಆದರೆ, ಈಗ ಹುಬ್ಬಳ್ಳಿಯ 55 ನೇ ವಾರ್ಡಿನ ಕೆ.ಎಚ್.ಬಿ.ಕಾಲೋನಿಯ ಶಿವಶಂಕರ್ ಐಹೊಳೆ ಅವರ ಮನೆ ಆವರಣದಲ್ಲಿ ಬೆಳೆದಿದ್ದ ಗಂಧದ ಮರವೊಂದನ್ನ ಈಗ ಸಿನಿಮೀಯ ರೀತಿಯಲ್ಲಿ ಕದ್ದು ಕಳ್ಳರು ಪರಾರಿ ಆಗಿದ್ದಾರೆ.
=======
ಕುಡಿಯುವ ನೀರಲ್ಲಿ ಚರಂಡಿ ನೀರು
ಹುಬ್ಬಳ್ಳಿಯ ವಾರ್ಡ್ ನಂ63ರ ಚನ್ನಪೇಟದಲ್ಲಿ ಕುಡಿಯುವ ನೀರಲ್ಲಿ ಚರಂಡಿ ನೀರು ಬೆರೆತು ಬರುತ್ತಿದೆ. ಈ ಬಗ್ಗೆ ಸ್ಥಳೀಯರು ಆಕ್ರೋಶಿತರಾಗಿದ್ದಾರೆ. ಸದ್ಯ ಇಲ್ಲಿನ ಜನ ಸ್ವಚ್ಛ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ.
======
ಹಲ್ಲೆಗೈದ ಮೂವರು ಆರೋಪಿಗಳ ಬಂಧನ
ನವಲಗುಂದ ತಾಲೂಕಿನ ಬಸಾಪುರ ಗ್ರಾಮದ ಗಂಗಾಧರ ತೊರವಿ ಎಂಬುವವರ ಮೇಲೆ ಹಲ್ಲೆ ನಡೆಸಿದ ಮೂವರು ಆರೋಪಿಗಳನ್ನು ನವಲಗುಂದ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಲ್ಲೆ ಮಾಡಿದ್ದು ಯಾವ ಕಾರಣಕ್ಕೆ ಎಂಬುದರ ಬಗ್ಗೆ ಪೊಲೀಸರು ಆರೋಪಿಗಳ ವಿಚಾರಣೆ ನಡೆಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
07/03/2022 09:58 pm