ಹುಬ್ಬಳ್ಳಿ- ಉತ್ತರ ಕರ್ನಾಟಕದ ಪ್ರತಿಷ್ಟಿತ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿಯೇ 60 ಕ್ಕೂ ಹೆಚ್ಚು ಸಿಬ್ಬಂದಿ ಬಾಡೂಟ ಏರ್ಪಾಡು ಮಾಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಹೌದು ಕೊರೊನಾ ರೋಗಿಗಳ ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿದ್ದು, ಉತ್ತಮ ಹೆಸರು ಮಾಡಿರುವ ಕಿಮ್ಸ್ ಆಸ್ಪತ್ರೆಯ ವೈದ್ಯರು ಹಾಗೂ ಆಡಳಿತ ಮಂಡಳಿಯ ಕಿಮ್ಸ್ ಆವರಣದಲ್ಲಿ ಬಾಡೂಟ ಮಾಡಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕಿಮ್ಸ್ ನ ಲೇಡಿಸ್ ಹಾಸ್ಟೆಲ್ ಹಿಂಭಾಗದಲ್ಲಿ ಕುರಿ, ಕೋಳಿ ಮಾಂಸದ ಅಡುಗೆ ತಯಾರಿಸಿ ಕಿಮ್ಸ್ ಆಡಳಿತಾಧಿಕಾರಿ ಸೇರಿದಂತೆ 60 ಮಂದಿ ಬಾಡೂಟ ಸವಿದಿದ್ದಾರೆ.
ಸರ್ಕಾರಿ ಕ್ಯಾಂಪಸ್ ಅದರಲ್ಲೂ ಯಾವುದೇ ಆಸ್ಪತ್ರೆಯ ಆವರಣದಲ್ಲಿ ಇಂತ ಬಾಡೂಟಕ್ಕೆ ಅವಕಾಶವಿಲ್ಲ. ಆದ್ರೆ ಇಲ್ಲಿ ಎಲ್ಲವನ್ನು ಗಾಳಿಗೆ ತೂರಿ ಬಾಡೂಟ ಆಯೋಜನೆ ಮಾಡಿದ್ದಾರೆ.
ಕಿಮ್ಸ್ ಆಡಳಿತ ಮಂಡಳಿ ಪದಾಧಿಕಾರಿಗಳು, ವೈದ್ಯರು, ಹಾಗೂ ಸ್ಟಾಫ್ ನರ್ಸ್ ಗಳು ಸೇರಿದಂತೆ 60 ಹೆಚ್ಚು ಸಿಬ್ಬಂದಿ ಭಾಗವಹಿಸಿದ್ದರು.
ಆದ್ರೆ ಈ ಬಾಡೂಟವನ್ನು ಕಿಮ್ಸ್ ಆಡಳುತಾಧಿಕಾರಿ ರಾಜೇಶ್ವರಿ ಜೈನಾಪುರ ಸಮರ್ಥಿಸಿಕೊಂಡಿದ್ದಾರೆ.
ಕೊವಿಡ್ ಸಂದರ್ಭದಲ್ಲಿ ಸಿಬ್ಬಂದಿ ಉತ್ತಮ ಕೆಲಸ ಮಾಡಿದ್ದಾರೆ. ಹೀಗಾಗಿ ಅವರಿಗೆ ಊಟ ಹಾಕಲಾಗಿದೆ. ಇದರಲ್ಲಿ ಯಾವುದೇ ತಪ್ಪಿಲ್ಲ. ಇಲ್ಲಿ ಬಂದವರು ಕಿಮ್ಸ್ ನಲ್ಲಿ ಕೆಲಸ ಮಾಡುವ ಗುತ್ತಿಗೆ ಕಾರ್ಮಿಕರು.
ಅಂತವರಿಗೆ ಊಟ ಹಾಕಿದ್ದು ತಪ್ಪಾ ಎಂದು ಪ್ರಶ್ನಿಸಿದ್ದಾರೆ.
Kshetra Samachara
14/12/2020 08:05 pm