ಹುಬ್ಬಳ್ಳಿ: ಬೆಳಗಾವಿಯಲ್ಲಿ ಸೋಮವಾರ ಬೆಳಿಗ್ಗೆ ಲ್ಯಾಂಡ್ ಆಗಬೇಕಿದ್ದ ಇಂಡಿಗೋ ಸಂಸ್ಥೆ ವಿಮಾನ ಹವಾಮಾನ ವೈಪರೀತ್ಯದ ಕಾರಣಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಿದೆ. ಇದರಿಂದಾಗಿ ಪ್ರಯಾಣಿಕರು ಬಸ್ ಮೂಲಕ ಬೆಳಗಾವಿಗೆ ಹೋಗಿದ್ದಾರೆ.
ಈ ವಿಮಾನ ಹೈದರಾಬಾದ್‌ನಿಂದ ಹೊರಟಿತ್ತು. ನಿಗದಿಯಂತೆ ಬೆಳಗಾವಿಯಲ್ಲಿ ಲ್ಯಾಂಡ್ ಮಾಡಲು ಪೈಲಟ್ ಪ್ರಯತ್ನಿಸಿದ್ದರು. ಇದಕ್ಕೆ ಪೂರಕವಾದ ವಾತಾವರಣ ಇಲ್ಲದ ಕಾರಣ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಿದೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದ್ ಕುಮಾರ ಠಾಕರೆ ತಿಳಿಸಿದ್ದಾರೆ.
Kshetra Samachara
13/10/2020 07:15 am