ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಮುಳುಗಡೆಯಾದ ಕಿರು ಸೇತುವೆಯಲ್ಲೇ ಸಂಚಾರ: ಹುಚ್ಚು ಸಾಹಸಕ್ಕೆ ಮುಂದಾದ ಗ್ರಾಮಸ್ಥರು

ನವಲಗುಂದ : ಮಳೆಗಾಲದಲ್ಲಿ ಹಳ್ಳ ಕೊಳ್ಳಗಳ ಹರಿವು ಹೆಚ್ಚುತ್ತಲೇ, ಕಿರು ಸೇತುವೆಗಳು ಜಲಾವೃತವಾಗಿ ಬಿಡುತ್ತವೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕರು ಹುಚ್ಚು ಸಾಹಸಕ್ಕೆ ಕೈ ಹಾಕಿ ತಮ್ಮ ಜೀವಕ್ಕೆ ಸಂಚಕಾರ ತಂದುಕೊಳ್ಳುತ್ತಾರೆ. ಈಗ ಇಂತಹದ್ದೇ ದೃಶ್ಯಗಳು ನವಲಗುಂದ ತಾಲ್ಲೂಕಿನ ನಾಯಕನೂರು ಹಾಗೂ ಶಲವಡಿ ಮಾರ್ಗ ಮಧ್ಯೆ ಕಂಡು ಬಂತು.

ಶುಕ್ರವಾರ ಸಂಜೆ ಸುರಿದ ಭಾರೀ ಮಳೆಗೆ ತಾಲ್ಲೂಕಿನ ನಾಯಕನೂರು ಹಾಗೂ ಶಲವಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯದ ಬಳೆಗೋಳ ಹಳ್ಳ ಸಂಪೂರ್ಣ ಭರ್ತಿಯಾಗಿ ತುಂಬಿ ಹರಿಯುತ್ತಿದೆ. ಪರಿಣಾಮ ಕಿರು ಸೇತುವೆ ಮುಳುಗಡೆಯಾಗಿದೆ. ಇಂತಹ ಸೇತುವೆಯ ಮೇಲೆ ಗ್ರಾಮಸ್ಥರು ಹುಚ್ಚು ಸಾಹಸಕ್ಕೆ ಮುಂದಾಗಿದ್ದು, ಕಾಲ್ನಡಿಗೆ ಹಾಗೂ ಬೈಕ್ ಗಳನ್ನು ದಾಟಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ.

ಅಲ್ಲದೇ ಬಸ್ ಸಹ ಸೇತುವೆಯಲ್ಲಿ ಸಂಚರಿಸಿದ್ದು ಆತಂಕವನ್ನು ಹೆಚ್ಚಿಸಿತ್ತು. ಈ ರೀತಿಯ ಕಿರು ಸೇತುವೆ ಬದಲು ಬೃಹತ್ ಸೇತುವೆ ನಿರ್ಮಾಣವಾಗಬೇಕು ಎಂಬುದು ಸಹ ಸ್ಥಳೀಯರ ಆಗ್ರಹವಾಗಿದೆ.

Edited By : Manjunath H D
Kshetra Samachara

Kshetra Samachara

30/07/2022 12:31 pm

Cinque Terre

17.48 K

Cinque Terre

2

ಸಂಬಂಧಿತ ಸುದ್ದಿ