ಹುಬ್ಬಳ್ಳಿ: ಚರಂಡಿಯೊಂದರಲ್ಲಿ ಆಕಳ ಕರುವೊಂದು ಬಿದಿದ್ದು ಎರಡು ದಿನಗಳ ಕಾಲ ತೊಂದರೆ ಪಟ್ಟಿದೆ. ಇದನ್ನ ತಿಳಿದ ಸ್ಥಳೀಯರು ಈಗ ಆ ಕರುವನ್ನ ರಕ್ಷಿಸಿದ್ದಾರೆ. ಈ ಒಂದು ಘಟನೆ ನಗರದ ರೇಣುಕಾ ನಗರದಲ್ಲಿ ನಡೆದಿದೆ.
ಕೂಡಲೆ ಗಮನಿಸಿದ ಸ್ಥಳೀಯರು, ಅಗ್ನಿಶಾಮಕ ದಳಕ್ಕೆ ತಿಳಿಸಿದ್ದಾರೆ. ಕರುವನ್ನು ಹೊರ ತೆಗೆಯಲು ಹರಸಾಹಸ ಮಾಡುತ್ತಿದ್ದಾರೆ.
ಕಳೆದ ಎರಡು ದಿನಗಳಿಂದ ಆಕಳು ಕರು ಕಾಲು ಜಾರಿ ಚರಂಡಿಯಲ್ಲಿ ಬಿದ್ದು ಸಿಕ್ಕಿಹಾಕಿಕೊಂಡಿತ್ತು. ಸ್ಥಳೀಯರ ಸಹಾಯದಿಂದ ಅಗ್ನಿಶಾಮಕದಳದ ಸಿಬ್ಬಂದಿ ಕರುವನ್ನು ಮೇಲೆತ್ತಿ ವೈದ್ಯರಿಂದ ಚಿಕಿತ್ಸೆ ನೀಡಿಸಿದ್ದಾರೆ.
Kshetra Samachara
01/07/2022 10:10 pm