ಹುಬ್ಬಳ್ಳಿ: ಕಳೆದ ಎರಡು ದಿನ ಹುಬ್ಬಳ್ಳಿಯ ಜನರಲ್ಲಿ ಸಾಕಷ್ಟು ಆತಂಕವನ್ನು ಹುಟ್ಟು ಹಾಕಿದ್ದ ಮಳೆರಾಯನ ಆರ್ಭಟ ಮೂರನೇ ದಿನವೂ ಮುಂದುವರೆದಿದ್ದು, ಹುಬ್ಬಳ್ಳಿ ಮಂದಿ ಹೈರಾಣಾಗಿದ್ದಾರೆ.
ಬಿಸಿಲಿನ ವಾತಾವರಣದಲ್ಲಿಯೇ ಆರಂಭಗೊಂಡ ಮಳೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಮನೆಗೆ ಹೋಗಲು ಜನರು ಪರದಾಡುವಂತಾಗಿದೆ. ಸದ್ಯ ಅಕಾಲಿಕ ಮಳೆಯಿಂದಾಗಿ ಹುಬ್ಬಳ್ಳಿ ಮಂದಿ ಆತಂಕಗೊಂಡಿದ್ದು, ಎರಡು ದಿನಗಳು ಹುಬ್ಬಳ್ಳಿಗೆ ಕರಾಳದಿನವಾಗಿ ಪರಿಣಮಿಸಿದೆ. ಎಲ್ಲೆಂದರಲ್ಲಿ ಮರ ಬಿದ್ದು ವಾಹನ ಜಖಂಗೊಂಡಿದ್ದು, ಪ್ರಯಾಣಿಕನೊಬ್ಬ ಸಾವನ್ನಪ್ಪಿದ್ದು ಜನರ ಆತಂಕ ಮತ್ತಷ್ಟು ಹೆಚ್ಚಾಗಿದೆ. ಇಂದು ಕೂಡ ವರುಣನ ಆರ್ಭಟ ಜೋರಾಗಿದೆ.
ಆರಂಭದಲ್ಲಿಯೇ ದೊಡ್ಡ ಪ್ರಮಾಣದ ಗಾಳಿ ಬಿಸಿದ್ದು, ಮಳೆ ಆರಂಭಗೊಂಡ ಹಿನ್ನೆಲೆಯಲ್ಲಿ ಜನ ಮನೆಗಳತ್ತ ಕಾಲ್ಕಿತ್ತಿದ್ದಾರೆ. ಒಟ್ಟಿನಲ್ಲಿ ಮಳೆರಾಯನ ಆಟಕ್ಕೆ ಜನ ತತ್ತರಿಸಿ ಹೋಗಿದ್ದಂತೂ ಸುಳ್ಳಲ್ಲ.
Kshetra Samachara
06/05/2022 07:57 pm