ನವಲಗುಂದ : ಪಟ್ಟಣದಲ್ಲಿನ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಮಯದಲ್ಲಿ ಅಧಿಕಾರಿಯೊಬ್ಬರ ಮೇಲೆ ಹಾವೊಂದು ಮೇಲಿಂದ ಬಿದಿದೆ. ಇದರಿಂದ ಗಾಬರಿಗೊಂಡ ಅಧಿಕಾರಿಗಳು ಕಚೇರಿಯಿಂದ ಕಾಲ್ಕಿತ್ತ ಘಟನೆ ಗುರುವಾರ ನಡೆದಿದೆ.
ಹೌದು ಹಂಚಿನಲ್ಲಿದ್ದ ಹಾವು, ಕೆಳಗೆ ಕೆಲಸ ನಿರ್ವಹಿಸುತ್ತಿದ್ದ ಅಧಿಕಾರಿಯ ಮೇಲೆ ಬಿದಿದೆ. ಕೂಡಲೇ ಹಾವು ಅಲ್ಲಿಂದ ಟಿಜೋರಿ ಕೆಳಗೆ ಅವಿತು ಕುಳಿತಿತ್ತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಸ್ನೇಕ್ ಪ್ರಕಾಶ್ ಚಿಗರಿ ಅವರು ಹಾವನ್ನು ಹಿಡಿದು, ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.
Kshetra Samachara
03/02/2022 04:44 pm