ಹುಬ್ಬಳ್ಳಿ : ರೈತನೊಬ್ಬ ಸಾಕಿದ ನಾಟಿಕೋಳಿ ಹಾಗೂ ಮರಿಗಳು ಮುಂಗುಸಿ ದಾಳಿಗೆ ಬಲಿಯಾಗಿ ಸಾವಿರ ಮರಿಗಳು ಸಾವನ್ನಪ್ಪಿದ ಘಟನೆ ಹುಬ್ಬಳ್ಳಿ ತಾಲೂಕಿನ ಬು.ಅರಳಿಕಟ್ಟಿ ಗ್ರಾಮದಲ್ಲಿ ನಿನ್ನೆ ಸಾಯಂಕಾಲದ ಅವಧಿಯಲ್ಲಿ ನಡೆದಿದೆ.
ಹೌದು ! ಬು.ಅರಳಿಕಟ್ಟಿ ಗ್ರಾಮದ ರೈತ ಸಿ.ಬಿ.ಮರಿಗೌಡ್ರ ಎಂಬುವವರು ತಮ್ಮ ಜಮೀನಿನಲ್ಲಿ ಮೊದಲ ಬಾರಿಗೆ ಪ್ರಯೋಗ ಎಂಬಂತೆ ಸಾಕಿದ ಸಾವಿರ ನಾಟಿಕೋಳಿಗಳು ಮುಂಗುಸಿ ದಾಳಿಗೆ ಬಲಿಯಾಗಿ ಜೀವ ಬಿಟ್ಟಿದ್ದು, ರೈತನ ಬದುಕು ಅಕ್ಷರಶಃ ಹಾನಿಯಾಗಿದೆ.
ಈ ಬಗ್ಗೆ ಸ್ವತಃ ರೈತ ಸಿ.ಬಿ.ಮರಿಗೌಡ ಪಬ್ಲಿಕ್ ನೆಕ್ಸ್ಟ್'ಗೆ ವಿಡಿಯೋ ಕಳುಹಿಸಿ ಸಮರ್ಪಕ ಅನುಭವ ಹಾಗೂ ಸೂಕ್ತ ಜಾಗೃತೆ ಜೊತೆ ಕೋಳಿ ಸಾಕಾಣಿಕೆ ಆರಂಭಿಸುವಂತೆ ಮನವಿ ಮಾಡಿದ್ದಾರೆ.
Kshetra Samachara
23/12/2021 02:07 pm