ಧಾರವಾಡ: ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ಕಬ್ಬಿನ ಗದ್ದೆಯೊಂದರಲ್ಲಿ ಅಡಗಿ ಕುಳಿತಿರುವ ಚಿರತೆ ಜಾನುವಾರು ಶಿಕಾರಿ ಮಾಡಲು ಹೊಂಚು ಹಾಕಿ ಕುಳಿತಿತ್ತು ಎಂದು ತಿಳಿದು ಬಂದಿದೆ.
ಸುಮಾರು 35 ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದ್ದು, ಈ ಕಬ್ಬಿನ ಗದ್ದೆಯಲ್ಲಿ ಚಿರತೆ ಅಡಗಿ ಕುಳಿತಿದೆ. ಈ ಹೊಲದ ಮಾಲೀಕರ ಕಣ್ಣಿಗೂ ಚಿರತೆ ಕಾಣಿಸಿಕೊಂಡಿದೆ. ಈ ಹೊಲದಲ್ಲಿ ದನ, ಕರುಗಳನ್ನು ಕಟ್ಟಲು ಮನೆ ಕೂಡ ಇದ್ದು, ಅದರ ಪಕ್ಕದಲ್ಲೇ ಜಾನುವಾರುಗಳನ್ನು ಕಟ್ಟಲಾಗಿತ್ತು. ಈ ಜಾನುವಾರುಗಳನ್ನು ಶಿಕಾರಿ ಮಾಡಲು ಚಿರತೆ ಕಾದು ಕುಳಿತಿತ್ತು ಎಂಬುದನ್ನು ಅದನ್ನು ನೋಡಿದ ಗ್ರಾಮಸ್ಥರೇ ಹೇಳಿದ್ದಾರೆ.
ಸದ್ಯ ಸ್ಥಳದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಬೀಡು ಬಿಟ್ಟಿದ್ದು, ಚಿರತೆ ಸೆರೆ ಹಿಡಿಯುವುದಕ್ಕಾಗಿ ಎಲ್ಲಾ ತಂತ್ರಗಳನ್ನು ಬಳಕೆ ಮಾಡುತ್ತಿದ್ದಾರೆ.
Kshetra Samachara
22/09/2021 09:49 pm