ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಅರ್ಧ ಗಂಟೆಯಲ್ಲಿ ಕರಗಿ ಮಣ್ಣಾದ ವಿಘ್ನೇಶ್ವರ

ಧಾರವಾಡ: ಮಂಗಳವಾರ ನಾಡಿನಾದ್ಯಂತ ಐದು ದಿನಗಳ ಕಾಲ ಪೂಜಿಸಲ್ಪಟ್ಟ ಗಣಪತಿ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ.

ಧಾರವಾಡದ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು ಸಿದ್ಧಪಡಿಸಿದ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳು ಕೇವಲ ಅರ್ಧ ಗಂಟೆ ಸಮಯದಲ್ಲೇ ಕರಗಿ ಮಣ್ಣಾಗಿವೆ.

ಬೇರೆ ಬೇರೆ ದೇಶಗಳಲ್ಲಿರುವ ಅನಿವಾಸಿ ಭಾರತೀಯರು ಮಂಜುನಾಥ ಹಿರೇಮಠ ಅವರ ಬಳಿ ಗಣೇಶನ ಮೂರ್ತಿಗಳನ್ನು ಖರೀದಿ ಮಾಡಿದ್ದರು. ಅವುಗಳನ್ನು ಸಾಮೂಹಿಕವಾಗಿ ತಾವೇ ಪೂಜೆ ಮಾಡಿ ವಿಸರ್ಜನೆ ಮಾಡುವಂತೆಯೂ ಹಿರೇಮಠ ಅವರಿಗೆ ತಿಳಿಸಿದ್ದರು. ಆ ಪ್ರಕಾರ ಮಂಜುನಾಥ ಹಿರೇಮಠ ಅವರು ಐದು ದಿನಗಳ ಕಾಲ ಗಣಪತಿ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ನಿನ್ನೆ ವಿಸರ್ಜನೆ ಮಾಡಿದ್ದಾರೆ.

ಗ್ಲೋಬಲ್ ಗಣೇಶೋತ್ಸವ ಎಂಬ ಹೆಸರಿನಡಿ ಈ ಗಣಪತಿ ಮೂರ್ತಿಗಳಿಗೆ ಹಿರೇಮಠ ಅವರು ಪೂಜೆ ಸಲ್ಲಿಸಿದ್ದರು. ಮಂಗಳವಾರ ತಮ್ಮ ಮನೆಯ ಆವರಣದಲ್ಲಿಯೇ ಸಾಮೂಹಿಕವಾಗಿ ಗಣಪತಿ ಮೂರ್ತಿಗಳನ್ನು ಶಾಸ್ತ್ರೋಕ್ತವಾಗಿ ವಿಸರ್ಜನೆ ಮಾಡಿದ್ದಾರೆ. ಮಣ್ಣಿನಿಂದ ಸಿದ್ಧಪಡಿಸಿದ ಈ ಮೂರ್ತಿಗಳು ಕೇವಲ ಅರ್ಧ ಗಂಟೆಯಲ್ಲಿಯೇ ಕರಗಿ ಮಣ್ಣಾಗಿದ್ದು ವಿಶೇಷವಾಗಿತ್ತು.

Edited By : Shivu K
Kshetra Samachara

Kshetra Samachara

15/09/2021 10:06 am

Cinque Terre

67.79 K

Cinque Terre

2

ಸಂಬಂಧಿತ ಸುದ್ದಿ