ಪಟ್ಟಣದ ಸಾರ್ವಜನಿಕ ಪ್ರದೇಶಗಳಲ್ಲಿ ಕೋತಿಗಳ ಹಾವಳಿಯಿಂದ ಜನ ಬೇಸತ್ತು ಹೋಗಿದ್ದಾರೆ. ನಿತ್ಯ ಹೊರಗಡೆ ನಿರ್ಭಿತಿಯಿಂದ ಓಡಾಡದಂತ ಸ್ಥಿತಿ ನಿರ್ಮಾಣವಾಗಿದೆ.
ಹೌದು ಅಣ್ಣಿಗೇರಿಯ ಬನಶಂಕರಿ ನಗರದಲ್ಲಿ ತೌಸಿಫ್ ಗೂಡುನಾಯ್ಕರ್ ಎಂಬ ಬಾಲಕನಿಗೆ ಹಾಗೂ ಶಿಕ್ಷಕ ಶಾಂತೇಶ್ ಉಣಕಲ್ ಎಂಬುವವ ಮೇಲೆ ಏಕಾಏಕಿ ದಾಳಿ ಮಾಡಿದ ಕೋತಿಗಳು ಮುಖ ಮತ್ತು ದೇಹಕ್ಕೆ ಗಂಭೀರ ಗಾಯ ಮಾಡಿವೆ.
ಸದ್ಯ ಗಾಯಾಳು ಪಟ್ಟಣದ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಾಗಿದ್ದಾರೆ.
ಇನ್ನು ಪಟ್ಟಣದಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿರುವುದು ಇದೇ ಮೊದಲಲ್ಲ ಇಷ್ಟೇಲ್ಲಾ ಅವಾಂತರಗಳು ಸಂಭವಿಸುತ್ತಿದ್ದರು ಸ್ಥಳೀಯ ಪುರಸಭೆ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಕ್ರಮ ಕೈಗೊಳ್ಳದಕ್ಕೆ ಜನ ಆಕ್ರೋಶಗೊಂಡಿದ್ದಾರೆ.
ಇನ್ನಾದರೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಜನಜೀವನಕ್ಕೆ ಉತ್ತಮ ವಾತಾವರಣ ನಿರ್ಮಾಣ ಮಾಡಿಕೊಡುವರೇ ಕಾಯು ನೋಡಬೇಕಿದೆ.
Kshetra Samachara
26/03/2022 12:09 pm