ಹುಬ್ಬಳ್ಳಿ: ನಾವೆಲ್ಲ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು ಹಾಗೂ ಇನ್ನಿತರ ಪ್ರಾಣಿಗಳಿಗೆ ಸ್ನಾನವನ್ನು ಮಾಡಿಸೋರನ್ನ ನೋಡಿದ್ದೇವೆ. ಆದರೆ ಇಲ್ಲೋರ್ವ ಮಾತ್ರ ಹಾವಿಗೆ ಶಾಂಪೂ, ಸೋಪ್ ಹಚ್ಚಿ ಸ್ನಾನ ಮಾಡಿಸುವುದರ ಮೂಲಕ ಅದರ ಜೀವವನ್ನು ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾನೆ. ಅಷ್ಟಕ್ಕೂ ಯಾರಿತ.? ಏನಿದು ಹಾವಿನ ಕಥೆ ಅಂತೀರಾ ಈ ಸ್ಟೋರಿಯನ್ನು ನೋಡಿ.
ಹೌದು. ಈ ರೀತಿ ಯಾವುದೇ ಆತಂಕವಿಲ್ಲದೇ ಹಾವಿಗೆ ಶಾಂಪೂ, ಸೋಪ್ ಹಾಕಿ ತಿಕ್ಕಿ ತಿಕ್ಕಿ ಸ್ನಾನ ಮಾಡಿಸುತ್ತಿರುವ ಇವರು ಸಂಗಮೇಶ ಚಕ್ರಸಾಲಿ. ವೃತ್ತಿಯಲ್ಲಿ ಉರಗ ತಜ್ಞರಾಗಿದ್ದು, ಈವರೆಗೆ ಸುಮಾರು 18,500ಕ್ಕೂ ಅಧಿಕ ಹಾವುಗಳನ್ನು ರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
ಇಂದು ಸಹ ಹುಬ್ಬಳ್ಳಿಯ ಹೊಸ ಕೋರ್ಟ್ ಬಳಿ ಇರುವ ಡಂಬಳ ಎಂಬುವರ ಮನೆಗೆ ಏಳು ಅಡಿಯ ಕೆರೆಯ ಹಾವು ನುಗ್ಗಿದ, ಪರಿಣಾಮ ಮನೆಯವರೆಲ್ಲ ಭಯಭೀತರಾಗಿ ಹಾವಿನ ಮೇಲೆ ಸೀಮೆ ಎಣ್ಣೆ ಚೆಲ್ಲಿದ್ದರು. ಇದರಿಂದಾಗಿ ಕೆರೆ ಹಾವು ಮನೆಯ ಗೋಡೆಯಿಂದ ಹೊರಬದೆ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿತ್ತು. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸ್ನೇಕ್ ಸಂಗಮೇಶ ಅವರು ಆತಂಕಕ್ಕೆ ಒಳಗಾದ ಕೆರೆಯ ಹಾವನ್ನು ರಕ್ಷಿಸುವ ಕೆಲಸ ಮಾಡಿದ್ದಾರೆ.
ಹಾವು ಕಂಡರೆ ಸಾಕು ಕಚ್ಚಿ ಜೀವ ತಗೆಯತ್ತದೆ ಅನ್ನೋ ಭಯದಲ್ಲಿ ಬಿದ್ದು ಓಡುವರ ಮಧ್ಯ ಹಾವನ್ನು ರಕ್ಷಣೆ ಮಾಡುತ್ತಿರುವ ಸಂಗಮೇಶ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು.
ವಿನಯ ರೆಡ್ಡಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ.
Kshetra Samachara
08/09/2022 01:00 pm