ವರದಿ: ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
ಕುಂದಗೋಳ : ಅಲ್ಲೇಲ್ಲಾ ಶೃಂಗರಿಸಿದ ಪೆಂಡಾಲು, ಒಂದೇಡೆ ಸೇರಿದ ಸಭಿಕರು ಎಲ್ಲರ ಮೊಗದಲ್ಲೂ ಉತ್ಸಾಹ ಉಲ್ಲಾಸ ಅದು ಏತಕ್ಕೆ ಗೊತ್ತಾ ? ಅದೇ ಸ್ವಾಮಿ ಈ ರಾಮ ಶರೀಫರ ಜನ್ಮದಿನದ ಸಂಭ್ರಮ ಸವಿಯಲು.
ಎಸ್.! ಕುಂದಗೋಳ ತಾಲೂಕಿನ ಪಶುಪತಿಹಾಳ ಗ್ರಾಮದ ಇಮಾಮಸಾಬ್ ದಾವಲಸಾಬ್ ಅಂಗಡಿ ಎಂಬ ರೈತ ತನ್ನ ಮನೆಯಲ್ಲಿ ಹುಟ್ಟಿ 20 ವರ್ಷ ಕೃಷಿ ಕಾಯಕಕ್ಕೆ ಹೆಗಲು ಕೊಟ್ಟ ದುಡಿದ ಎರೆಡು ಜಾನುವಾರುಗಳು ಇಪ್ಪತ್ತು ವರ್ಷ ಪೊರೈಸಿದ ಹಿನ್ನೆಲೆಯಲ್ಲಿ ಆ ಜಾನುವಾರುಗಳ ಜನ್ಮದಿನವನ್ನು ಜಾನುವಾರುಗಳ ಶುಭ್ರವಾಗಿ ತೊಳೆದು, ಅಲಂಕಾರ ಮಾಡಿ, ಪೂಜೆ ಮಾಡಿ, ಆರತಿ ಎತ್ತಿ ಮಂತ್ರ ಪಠಿಸಿ, ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.
ಈ ರೈತನ ಜಾನುವಾರು ಪ್ರೇಮ ಕಂಡು ತನ್ನ ಮಕ್ಕಳಂತೆ ಜಾನುವಾರು ಜನ್ಮದಿನ ಆಚರಣೆ ಮಾಡಿದ ವಿಶೇಷತೆಗೆ ಇಡೀ ಪಶುಪತಿಹಾಳ ಗ್ರಾಮ ಅಷ್ಟೇ ಅಲ್ಲಾ ಇಡೀ ತಾಲೂಕಿನ ಜನ ಆಚ್ಚರಿ ಜೊತೆ ಬೇಷ್ ಅನ್ನದಾತ ಎಂದಿದ್ದಾರೆ.
ಇನ್ನೂ ವಿಶೇಷ ಎಂದರೆ ಈ ಇಮಾಂಸಾಬ್ ದಾವಲಸಾಬ್ ಅಂಗಡಿ ತನ್ನ ಜಾನುವಾರುಗಳಿಗೆ ಒಂದಕ್ಕೆ ರಾಮ ಇನ್ನೊಂದಕ್ಕೆ ಶರೀಫ್ ಎಂದು ಹೆಸರಿಟ್ಟು ಜಾತಿ ಮತ ಧರ್ಮದ ಕಗ್ಗಟ್ಟನ್ನು ಬಿಡಿಸಿ ಎಲ್ಲರೂ ಒಂದೇ ಎಂಬ ಭಾವ ಸಾರಿದ್ದಾರೆ. ಇದೇ ಸಂಭ್ರಮದಲ್ಲಿ ಪಶುಪತಿಹಾಳ ಗ್ರಾಮ ಪಂಚಾಯಿತಿಗೆ ನೂತನವಾಗಿ ಆಯ್ಕೆಯಾದ ಗ್ರಾಪಂ ಸದಸ್ಯರಿಗೆ ಸನ್ಮಾನ ಸಹ ಮಾಡಿದ್ದಾರೆ.
Kshetra Samachara
01/01/2022 10:56 pm