ನವಲಗುಂದ ತಾಲ್ಲೂಕಿನಲ್ಲಿ ಹರಿಯುವ ಬೆಣ್ಣೆ ಹಳ್ಳದಲ್ಲಿ ಮಳೆಯಿಂದಾಗಿ ಪ್ರವಾಹ ಹೆಚ್ಚಿದೆ. ತುಂಬಿ ಹರಿಯುತ್ತಿರುವ ಹಳ್ಳದಲ್ಲಿ ಯುವಕನೋರ್ವ ಸಿಲುಕಿದ ಘಟನೆ ಸಹ ಇಂದು ನಡೆದಿತ್ತು. ಈ ಹಿನ್ನೆಲೆ ಯಮನೂರ ಗ್ರಾಮ ಪಂಚಾಯತ್ ವತಿಯಿಂದ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.
ಯಮನೂರ ಗ್ರಾಮದ ವ್ಯಾಪ್ತಿಯಲ್ಲಿನ ಬೆಣ್ಣೆ ಹಳ್ಳದಲ್ಲಿ ನಡೆದ ಘಟನೆ ಇದಾಗಿದ್ದು, ಪ್ರವಾಹದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಿಸಲಾಗಿದೆ. ನಂತರ ಬೆಣ್ಣೆ ಹಳ್ಳದ ಸೇತುವೆಗೆ ಭೇಟಿ ನೀಡಿದ ತಹಶೀಲ್ದಾರ್ ಅನೀಲ ಬಡಿಗೇರ ಅವರು ಚಾಂಗದೇವನ ದರ್ಶನಕ್ಕೆ ಆಗಮಿಸುವ ಭಕ್ತರನ್ನು ನೀರಿಗೆ ಇಳಿಯದಂತೆ ಯಮನೂರ ಗ್ರಾಮ ಪಂಚಾಯತ್‌ಗೆ ಸೂಚಿಸಲಾಯಿತು.
ಈ ಹಿನ್ನೆಲೆ ಯಮನೂರ ಗ್ರಾಮ ಪಂಚಾಯತ್ ಸಿಬ್ಬಂದಿಯಿಂದ ಬೆಣ್ಣೆ ಹಳ್ಳದ ಸೇರುವೆ ಬಳಿ ನೀರಿಗೆ ಭಕ್ತರು ಇಳಿಯದಂತೆ ಪ್ರಕಟಣೆಯನ್ನು ಹೊರಡಿಸಲಾಯಿತು.
Kshetra Samachara
12/10/2022 04:39 pm