ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಅಪಾಯದ ಮಟ್ಟ ಮೀರಿದ ಬೆಣ್ಣೆ ಹಳ್ಳ; ಗ್ರಾ.ಪಂ ವತಿಯಿಂದ ಪ್ರಕಟಣೆ

ನವಲಗುಂದ: ಸತತ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಈಗಾಗಲೇ ನವಲಗುಂದ ಭಾಗದಲ್ಲಿ ಬೆಣ್ಣೆ ಹಳ್ಳ ತುಂಬಿ ಹರಿಯುತ್ತಿದೆ. ಮಿತಿ ಮೀರಿ ಹರಿಯುತ್ತಿರುವ ಹಳ್ಳದ ರುದ್ರ ನರ್ತನದ ಹಿನ್ನೆಲೆ ಸಾರ್ವಜನಿಕರು ನೀರಿನಲ್ಲಿ ಇಳಿಯಬಾರದು ಹಾಗೂ ಹಳ್ಳದ ಬಳಿ ರೈತರು ಹೋಗ ಬಾರದು ಎಂದು ಯಮನೂರ ಗ್ರಾಮ ಪಂಚಾಯತ್ ವತಿಯಿಂದ ಇಂದು ಪ್ರಕಟಣೆ ಹೊರಡಿಸಲಾಯಿತು.

ಪ್ರತಿವರ್ಷ ಮಳೆಗಾಲಕ್ಕೆ ಬೆಣ್ಣೆ ಹಳ್ಳ ಅಪಾಯದ ಮಟ್ಟ ಮೀರಿ ಹರಿಯುತ್ತೆ, ಇದರ ಪರಿಣಾಮವಾಗಿ ರೈತರ ಜಮೀನುಗಳಲ್ಲಿ ನೀರು ನುಗ್ಗಿ ಬೆಳೆ ನಾಶವಾದ ಉದಾಹರಣೆಗಳಿವೆ. ಅಷ್ಟೇ ಅಲ್ಲದೆ ಪ್ರಾಣ ಹಾನಿ ಕೂಡ ಆದಂತಹ ಸಾಕಷ್ಟು ಉದಾಹರಣೆಗಳಿವೆ.

ಈ ಹಿನ್ನೆಲೆಯಲ್ಲಿ ಯಮನೂರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ವೀರೇಶ್ ಗುಡುದುರಮಠ ಅವರ ನೇತೃತ್ವದಲ್ಲಿ ಯಮನೂರ ವ್ಯಾಪ್ತಿಯ ಬೆಣ್ಣೆ ಹಳ್ಳದ ಸೇತುವೆ ಬಳಿ ಬಂದ ಭಕ್ತರನ್ನು ಕಳುಹಿಸುವ ಹಾಗೂ ಪ್ರಕಟಣೆ ಹೊರಡಿಸುವ ಮೂಲಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.

Edited By : Manjunath H D
Kshetra Samachara

Kshetra Samachara

20/05/2022 08:22 pm

Cinque Terre

27.76 K

Cinque Terre

0

ಸಂಬಂಧಿತ ಸುದ್ದಿ