ಅಳ್ನಾವರ: ತಾಲೂಕಿನಾದ್ಯಂತ ಸುರಿದ ಅಕಾಲಿಕ ಮಳೆಯಿಂದಾಗಿ ಹುಲಿಕೇರಿ ಇಂದಿರಮ್ಮನ ಕೆರೆಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ತಡೆ ಗೋಡೆ, ಡೌಗಿ ನಾಲಾ, ಬೆನಚಿ ಸೇತುವೆ ಹಾಳಾಗಿದ್ದ ಹಿನ್ನೆಲೆಯಲ್ಲಿ ಇಂದು ಕೇಂದ್ರ ಅತಿವೃಷ್ಟಿ ಅಧ್ಯಯನ ತಂಡ ಹಾಗೂ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಸಿಇಓ ಅಧಿಕಾರಿಗಳು ಭೇಟಿ ನೀಡಿದ್ದರು.
ಈಗಾಗಲೇ ಹುಲಿಕೇರಿ ಕೆರೆಯ ಕೆಲಸ ಪ್ರಾರಂಭವಾಗಿದ್ದು ಹೆಚ್ಚಿನ ಅನುದಾನದ ಸಲುವಾಗಿ ಹಾಗೂ ಕೆಲಸದ ಪರಿಶೀಲನೆಗೆ ಕೇಂದ್ರ ತಂಡ ಇಂದು ಹಾನಿ ಸಂಭವಿಸಿದೆ ಹಲವು ಕಡೆ ಭೇಟಿ ನೀಡಿತು. ಬೆನಚಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಪ್ರವಾಹಕ್ಕೆ ಸಿಲುಕಿ ಹಾನಿಗೊಳಗಾಗಿದ್ದು ಮತ್ತು ಬಾಲಗೇರಿ ಹಳ್ಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮುಖ್ಯವಾಗಿ ಪ್ರವಾಹದಲ್ಲಿ ಹಾನಿಯಾದ ಈ ಭಾಗದ ರೈತರಿಗೆ ಬೆಳೆ ಪರಿಹಾರ ಹಾಗೂ ಹಳ್ಳದ ದಡದಲ್ಲಿ ಜಮೀನಿನ ಮಣ್ಣು ಕೊರೆದು ಹೋಗಿದ್ದು ಆದಷ್ಟು ಬೇಗನೆ ಪರಿಹಾರ ಘೋಷಿಸಬೇಕೆಂದು, ಜೊತೆಗೆ ಸೇತುವೆ ನಿರ್ಮಾಣಕ್ಕೆ ಹೆಚ್ಚು ಅನುದಾನ ಒದಗಿಸಿ ಕಾಮಗಾರಿಯನ್ನು ಪ್ರಾರಂಭಿಸಬೇಕೆಂದು ಗ್ರಾಮಸ್ಥರ ಜೊತೆ ಬೆನಚಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾದ ಸಂದೀಪ ಪಾಟೀಲ ಮನವಿ ಮಾಡಿದರು.
ಕೇಂದ್ರದ ತಂಡ ಹಾನಿ ಸಂಭವಿಸಿದ ಸ್ಥಳಗಳಿಗೆ ಭೇಟಿ ನೀಡಿದ್ದು ಗ್ರಾಮಸ್ತರಲ್ಲಿ ಭರವಸೆಯ ಬೆಳಕು ಮೂಡಿದೆ.ಶೀಘ್ರ ವಾಗಿ ಕೆಲಸ ಪ್ರಾರಂಭ ಮಾಡಿ ಜನರ ಗೋಳನ್ನು ದೂರ ಮಾಡಬೇಕಿದೆ.
Kshetra Samachara
05/09/2021 06:10 pm