ನವಲಗುಂದ : ಮಳೆಗೆ ಅನ್ನದಾತನ ಸಂಕಟ ಹೇಳತೀರದ್ದಾಗಿ ಹೋಗಿದೆ. ತಿಂಗಳುಗಳಿಂದ ಕಷ್ಟ ಪಟ್ಟು ಬೆವರು ಸುರಿಸಿ, ತನ್ನ ಮಕ್ಕಳಂತೆ ಪೋಷಿಸಿ ಬೆಳೆದ ಬೆಳೆಗಳು ಅಕಾಲಿಕ ಮಳೆಗೆ ಈಗ ಸಂಪೂರ್ಣ ಹಾನಿಯಾಗಿದ್ದು, ರೈತನಿಗೆ ನುಂಗಲಾರದ ತುತ್ತಾಗಿ ಪರಿಣಾಮಿಸಿದೆ.
ಅಣ್ಣಿಗೇರಿ ತಾಲ್ಲೂಕಿನ ಸಾಸಿವೆಹಳ್ಳಿ ಸೇರಿದಂತೆ ತಾಲ್ಲೂಕಿನ ಬಹುತೇಕ ಭಾಗದಲ್ಲಿ ಬೆಳೆದ ಮೆಣಸಿನಕಾಯಿ, ಈರುಳ್ಳಿ, ಹತ್ತಿ, ಗೋವಿನ ಜೋಳ ಸೇರಿದಂತೆ ಅನೇಕ ಬೆಳೆಗಳು ಈಗ ವರುಣನ ಆಟಕ್ಕೆ ತತ್ತರಿಸಿ ಹೋಗಿದ್ದು, ಸಂಪೂರ್ಣ ನಾಶವಾಗಿವೆ. ಇನ್ನು ಮೆಣಸಿನಕಾಯಿಗೆ ರೋಗ ಅಂಟಿದ್ದು, ಹತ್ತಿ ಉದುರಿ ಹೋಗಿವೆ. ಈರುಳ್ಳಿ ಕೊಳೆತು ಹೋಗಿವೆ. ಇದನ್ನೆಲ್ಲಾ ನೋಡಿದ ರೈತ ಈಗ ತತ್ತರಿಸಿ ಹೋಗಿದ್ದಾನೆ. ವರುಣ ಯಾಕಿಂಗೆ ನಮ್ಮ ಬಾಳಲ್ಲಿ ಆಟವಾಡಿದೆ ಎಂದು ರೈತ ಹಿಡಿಶಾಪ ಹಾಕುವಂತಾಗಿದೆ. ಅದೇನೇ ಇರಲಿ ಇಂತಹ ಪರಿಸ್ಥಿತಿಯಲ್ಲಿ ಅನ್ನದಾತನಿಗೆ ಆಸರೆಯಾಗಬೇಕಿರೋದು ಸರ್ಕಾರ, ರೈತನಿಗೆ ಸರಿಯಾದ ಬೆಳೆ ಹಾನಿ ಪರಿಹಾರ ಮುಟ್ಟಿಸಿ, ದೇಶದ ಬೆನ್ನೆಲುಬು ಎಂದು ಕರೆಯಲ್ಪಡುವ ರೈತನಿಗೆ ಆಸರೆಯಾಗಬೇಕಿದೆ.
ವಿನೋದ ಇಚ್ಚಂಗಿ, ಪಬ್ಲಿಕ್ ನೆಕ್ಸ್ಟ್ ನವಲಗುಂದ
Kshetra Samachara
08/12/2021 02:01 pm