ಹುಬ್ಬಳ್ಳಿ: ನಮಸ್ಕಾರ ರೀ... ಸಾಹೇಬ್ರ ಸ್ಮಾರ್ಟ್ ಸಿಟಿ ಯೋಜನೆ ಅಂತಾರಲ್ಲ ಅದು ಹುಬ್ಬಳ್ಳಿ-ಧಾರವಾಡಕ್ಕೆ ಬಂದೈತೆನ್ರೀ..ಅರೇ ಹಿಂಗ್ಯಾಕ ಕೇಳ್ತಿದ್ದೀರಾ ಸ್ಮಾರ್ಟ್ ಸಿಟಿ ಯೋಜನೆ ಬಂದು ಸುಮಾರು ದಿನ ಆಯ್ತು ನೋಡ್ರಿ.ಮತ್ತೇ ಆದ್ರೂ ಹುಬ್ಬಳ್ಳಿ-ಧಾರವಾಡ ಯಾಕ ಸ್ಮಾರ್ಟ್ ಆಗಿಲ್ಲ.
ಹೌದು...ಇಂತಹದೊಂದು ಮಾತು ನಮ್ಮ ಹುಬ್ಬಳ್ಳಿ-ಧಾರವಾಡ ಮಂದಿ ಬಾಯೊಳಗೆ ಬರುವುದು ಸಹಜ ಆಗಿದೇ ಇಲ್ಲಿಯ ಉಣಕಲ್ ಕೆರೆಯಲ್ಲಿ ಬೆಳೆದಿರುವ ಜಲಕಳೆಯನ್ನು ತೆಗೆಯುವ ಕೆಲಸವೇನೋ ಸ್ವಲ್ಪ ಚುರುಕುಗೊಂಡಿದೆ. ಆದರೆ, ಕೆರೆಯಿಂದ ಕಿತ್ತು ತಂದಿದ್ದನ್ನು ರಸ್ತೆ ಬದಿ ಸುರಿಯುತ್ತಿದ್ದು, ‘ಸ್ಮಾರ್ಟ್’ ಅಭಿವೃದ್ಧಿಯು ಸಾರ್ವಜನಿಕರು ಮೂಗು ಮುರಿಯುವಂತೆ ಮಾಡಿದೆ.
ಸದಾ ನೀರಿರಬೇಕಾದ ಕೆರೆಯಲ್ಲಿ ಐಖೋರ್ನಿಯಾ ಕ್ರಾಸಿಪಸ್ ಕಳೆ ದಟ್ಟವಾಗಿ ಹರಡಿದೆ. ಕೆಲವು ಕಡೆಗೆ ಕೆರೆಯೇ ಕಾಣದಂತೆ ವ್ಯಾಪಿಸಿಕೊಂಡಿದೆ. ಇದರ ಮೂಲೋತ್ಪಾಟನೆ ಸೇರಿ ಕೆರೆ ಮತ್ತು ದಂಡೆಯಲ್ಲಿ ಬೇರೆ ಬೇರೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸ್ಮಾರ್ಟ್ ಸಿಟಿ ಯೋಜನೆ ಅಡಿ 14 ಕೋಟಿ 83 ಲಕ್ಷ ರೂ. ಮೀಸಲಿಡಲಾಗಿದೆ. ಬೆಂಗಳೂರಿನ ಜಿ. ನಾಗೇಂದ್ರ ಎನ್ನುವವರು ಟೆಂಡರ್ನಲ್ಲಿ ಈ ಕೆಲಸದ ಗುತ್ತಿಗೆ ಪಡೆದುಕೊಂಡಿದ್ದಾರೆ.
ಆದರೇ ಕಿತ್ತಿರುವ ಜಲಕಳೆಯನ್ನು ರಸ್ತೆಗೆ ಹಾಕುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಒಟ್ಟಿನಲ್ಲಿ ಒಂದಿಲ್ಲೊಂದು ರೀತಿಯ ಅವ್ಯವಸ್ಥೆಯಿಂದ ಉಣಕಲ್ ಕೆರೆಯ ಸೌಂದರ್ಯ ಹಾಳಾಗುತ್ತಿದೆ.
Kshetra Samachara
30/10/2020 11:47 am