ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಮಣ್ಣು ಕುಸಿಯುತ್ತಿದೆ ಹುಷಾರ್ರೀ...

ಧಾರವಾಡ: ಶತಮಾನ ಕಂಡ ಐತಿಹಾಸಿಕ ಮಹತ್ವ ಹೊಂದಿರುವ ಕೆಲಗೇರಿ ಕೆರೆಯ ತಳಭಾಗದ ರಸ್ತೆಯು ಕುಸಿಯುತ್ತಿದ್ದು ಅಲ್ಲಿನ ಗಾಯಿತ್ರಿಪುರಂ ನಿವಾಸಿಗಳು ತೀವ್ರ ಆತಂಕದಲ್ಲಿದ್ದಾರೆ.

ಕೆಲಗೇರಿ ರಸ್ತೆಯ ಒಂದು ಬದಿಗೆ ಜಲಮಂಡಳಿಯಿಂದ ಹಾಕಲಾಗಿದ್ದ ನೀರಿನ ಪೈಪು ಒಡೆದಿದೆ. ಜೊತೆಗೆ ಕೆರೆಯಲ್ಲಿ ನೀರಿನ ಪ್ರಮಾಣ ಗರಿಷ್ಠ ಮಟ್ಟದಲ್ಲಿದ್ದು ಕೆಳ ಭಾಗದಲ್ಲಿ ನೀರು ಬಸಿಯುತ್ತಿದೆ. ಈ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದ ವಾಹನಗಳು ರಸ್ತೆಯಲ್ಲಿ ಸಂಚಾರ ಮಾಡಿದಾಗ ಕ್ರಮೇಣ ಮಣ್ಣು ಕುಸಿಯುತ್ತಿದೆ. ಹೀಗಾಗಿ ಈ ರಸ್ತೆಯ ಕೆಳಭಾಗದಲ್ಲಿರುವ ಗಾಯಿತ್ರಿಪುರಂನ ಹತ್ತಾರು ಮನೆಗಳ ನಿವಾಸಿಗಳು ಎಲ್ಲಿ ಕೆರೆಯ ನೀರು ನುಗ್ಗುತ್ತದೆಯೋ ಎಂಬ ಭಯದಲ್ಲಿ ರಸ್ತೆಯ ಮೇಲೆ ಹುಷಾರು, ಕೆಳಗಡೆ ಮಣ್ಣು ಕುಸಿಯುತ್ತಿದೆ ಎಂದು ನಾಮಫಲಕ ಹಾಕಿ ಎಚ್ಚರಿಕೆ ನೀಡಿದ್ದಾರೆ.

ಸ್ಥಳೀಯ ನಾಗರೀಕರೇ ಈ ಎಚ್ಚರಿಕೆ ಕ್ರಮ ಕೈಗೊಂಡಿದ್ದು, ಈವರೆಗೂ ಪಾಲಿಕೆ ಅಥವಾ ಜಲಮಂಡಳಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ. ಈ ಸಮಸ್ಯೆಗೆ ಕೂಡಲೇ ಪರಿಹಾರ ನೀಡಿದರೆ ಒಳಿತು ಇಲ್ಲದೇ ಹೋದಲ್ಲಿ ದೊಡ್ಡ ಅನಾಹುತ ಆಗುವುದರಲ್ಲಿ ಸಂಶಯವೇ ಇಲ್ಲ ಎಂದು ಗಾಯಿತ್ರಿಪುರಂನ ನಿವಾಸಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

29/10/2020 07:35 pm

Cinque Terre

55.18 K

Cinque Terre

6

ಸಂಬಂಧಿತ ಸುದ್ದಿ