ಕುಂದಗೋಳ : ದವನದ ಹುಣ್ಣಿಮೆ ದಿನ ನೆರವೇರುವ ನಂದೀಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಡಾ.ರಂಭಾಪುರೀ ವೀರ ಸೋಮೇಶ್ವರ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಅತಿ ವಿಜೃಂಭಣೆಯಿಂದ ಯರೇಬೂದಿಹಾಳದಲ್ಲಿ ನಡೆಯಿತು.
ಹೌದು ! ಯರೇಬೂದಿಹಾಳ ಗ್ರಾಮದ ಆರಾಧ್ಯ ದೈವ ಬಸವೇಶ್ವರ ಜಾತ್ರಾ ನಿಮಿತ್ತ ವೀರಗಾಸೆ, ಕುಂಭಕೋಡಗಳ ಮೆರವಣಿಗೆಯಲ್ಲಿ ಹೂಗಳ ಅಲಂಕಾರದ ಡಾ.ವೀರ ಸೋಮೇಶ್ವರ ರಂಭಾಪುರೀ ಜಗದ್ಗುರುಗಳ ಅಡ್ಡಪಲ್ಲಕ್ಕಿ ಹಾಗೂ ಮೆರವಣಿಗೆ ಯಶಸ್ವಿಯಾಗಿ ನಡೆದು ಧಾರ್ಮಿಕತೆ ಸೊಬಗನ್ನು ಬಿಂಬಿಸಿತು.
ಬಳಿಕ ಕುಂಭಕೋಡಗಳ ಪೂಜಾ ಪ್ರತಿಷ್ಠಾಪನೆ ಇಷ್ಟಲಿಂಗ ಮಹಾಪೂಜೆ ಕಾರ್ಯಕ್ರಮ ಭಕ್ತಿ ಸಾಕ್ಷಾತ್ಕಾರದ ಚಿಲುಮೆ ಹರಿಸಿತು, ಡಾ.ವೀರ ಸೋಮೆಶ್ವರ ರಂಭಾಪುರೀ ಶ್ರೀಗಳ ನೇತೃತ್ವದಲ್ಲಿ ನಡೆದ ಧರ್ಮಸಭೆಯಲ್ಲಿ ಶ್ರೀ ಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಸೇರಿದಂತೆ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಧರ್ಮಸಭೆಯ ಪ್ರೋತ್ಸಾಹದ ನುಡಿಗಳು ಮಾನವ ಕುಲಕ್ಕೆ ಏಳ್ಗೆ ಜಾಗೃತಿಯ ಸಂಚಲನ ಮೂಡಿಸಿತು.
Kshetra Samachara
15/04/2022 11:54 am