ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಮಿಶ್ರಿಕೋಟೆ ಇಬ್ಬರು ಯುವಕರು ಪಿಎಫ್‌ಐ ಸಂಘಟನೆಯಲ್ಲಿ ಭಾಗಿ

ಕಲಘಟಗಿ: ತಾಲೂಕಿನ ಮಿಶ್ರಿಕೋಟೆ ಗ್ರಾಮದ ಸಿಕಂದರ್ ಮುಕ್ತುಂಸಾಬ್ ಶಾಲಗಾರ್ ಹಾಗೂ ಉಮರ್ ಫಾರುಖ್ ಕುಂಬಿ ಎಂಬ ಇಬ್ಬರು ಮುಸ್ಲಿಂ ಯುವಕರು ಪಿಎಫ್‌ಐ ಸಂಘಟನೆಯಲ್ಲಿ ಭಾಗಿಯಾಗಿದ್ದರು ಎಂಬ ಮಾಹಿತಿ ಸಿಕ್ಕಿದೆ.

ಈ ಇಬ್ಬರು ಯುವಕರು ಇತ್ತೀಚಿಗೆ ಸಾರ್ವಜನಿಕ ಶಾಂತಿ ಸುವ್ಯವಸ್ಥೆ ಕದಡುವ ಹಿಜಾಬ್ ಹಾಗೂ ನೂಪುರ ಶರ್ಮಾ ಸೇರಿದಂತಡ ಇನ್ನಿತರೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಆಸ್ತಿ ಪಾಸ್ತಿಗಳಿಗೆ ಹಾನಿಯುಂಟು ಮಾಡಿರುವ ಹಿನ್ನಲೆಯಲ್ಲಿ ಇಬ್ಬರನ್ನು ಕಲಘಟಗಿ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡು ಅವರ ಮೇಲೆ ಎಫ್‌ಐಆರ್ ದಾಖಲು ಮಾಡಿದ್ದಾರೆ.

ಆರೋಪಿಗಳು ಮಿಶ್ರಿಕೋಟೆ ಮದ್ನಾನ ಓಣಿಯ ನಿವಾಸಿಗಳಾಗಿದ್ದು ಇದರಲ್ಲಿ ಸಿಕಂದರ್ ಶಾಲಗಾರ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ. ಇನ್ನೊಬ್ಬ ಉಮರ್ ಫಾರುಕ್ ಟೈಲರಿಂಗ್ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಕಲಘಟಗಿ ಪೊಲೀಸ್ ಠಾಣೆಯ ಸಿಪಿಐ ಶ್ರೀಶೈಲ ಕೌಜಲಗಿಯವರು ಈ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.

ವರದಿ: ಉದಯ ಗೌಡರ

Edited By : Vijay Kumar
Kshetra Samachara

Kshetra Samachara

27/09/2022 01:57 pm

Cinque Terre

12.59 K

Cinque Terre

2

ಸಂಬಂಧಿತ ಸುದ್ದಿ