ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೂಟ್ ಮಾರ್ಚ್

ಧಾರವಾಡ: ಗಣೇಶ ಹಬ್ಬದ ನಿಮಿತ್ತವಾಗಿ ಧಾರವಾಡ ನಗರದ ಹಲವೆಡೆ ಪೊಲೀಸ್ ಪಥಸಂಚಲನ ನಡೆಸಲಾಗಿದ್ದು, ನಗರದ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿಪಿಐ ಬಾಳನಗೌಡ ಮಾನಶಟ್ಟರ್ ಹಾಗೂ ಪಿಎಸ್ಐ ಬಾಬಾ ಎಂ, ಮನ್ಮೋಜ ಎಸ್ ಡಿ ನೇತೃತ್ವದಲ್ಲಿ ರೂಟ್ ಮಾರ್ಚ್ ನಡೆಸಲಾಯಿತು.

ನಗರದ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಾದ ತೇಜಸ್ವಿನಗರ, ಪುರೋಹಿತನಗರ, ಶ್ರೀರಾಮನಗರ, ಕಲ್ಯಾಣ ನಗರ, ರೈಲ್ವೆ ಸ್ಟೇಷನ್, ಲಕ್ಷ್ಮಿಸಿಂಗನಕೇರಿ ಹಾಗೂ ಎಮ್ಮಿಕೇರಿಗಳಲ್ಲಿ ರೂಟ್ ಮಾರ್ಚ್ ನಡೆಸಿ, ಯಾವುದೇ ಅಹಿತಕರ ಘಟನೆ ನಡೆಯದಂತೆ ಅಧಿಕಾರಿಗಳು ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಠಾಣೆಯ ಎಲ್ಲಾ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

30/08/2022 10:43 pm

Cinque Terre

19.65 K

Cinque Terre

0

ಸಂಬಂಧಿತ ಸುದ್ದಿ