ನವಲಗುಂದ : ಪೊಲೀಸ್ ಅಧಿಕಾರಿಗಳನ್ನು ನೋಡಿದ್ರೆ ಜನ ಸಾಮಾನ್ಯರಿಗೆ ಕೊಂಚ ಭಯದ ವಾತಾವರಣ ಸೃಷ್ಟಿ ಆದ ಹಾಗಿರುತ್ತೆ, ಆದರೆ ಪೊಲೀಸರು ಸಹ ಸ್ನೇಹ ಜೀವಿಗಳು ಎಂಬುದಕ್ಕೆ ಮಕ್ಕಳೊಂದಿಗಿನ ಅವರ ಒಡನಾಟವೇ ಸಾಕ್ಷಿ.
ಎಸ್... ನವಲಗುಂದ ಪಟ್ಟಣದಲ್ಲಿನ ಜನಸ್ನೇಹಿ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ನವೀನ ಜಕ್ಕಲಿ ಅವರ ನೇತೃತ್ವದಲ್ಲಿ ರಾಣಿಚನ್ನಮ್ಮ ವಸತಿ ಶಾಲಾ ಮಕ್ಕಳಿಗೆ ತೆರೆದ ಮನೆ ಕಾರ್ಯಕ್ರಮದ ಮೂಲಕ ಕಾನೂನು ಹಾಗೂ ಪೊಲೀಸರ ಕಾರ್ಯವೈಖರಿ ಬಗ್ಗೆ ಅರಿವು ಮೂಡಿಸಲಾಯಿತು.
ಕೈಗೆ ಬೇಡಿ ಏಕೆ ಹಾಕ್ತಾರೆ, ಮಕ್ಕಳನ್ನು ಜೈಲಿನಲ್ಲಿ ಇಟ್ಟುಕೊಳ್ಳುವುದಿಲ್ಲವೇ, ಪಿಸ್ತೂಲ್ ಯಾವಾಗ ಬಳಸುತ್ತೀರಾ, ಕಳ್ಳರು ಹಿಡಿದು ಏನ್ ಮಾಡುತ್ತೀರಾ.. ಎಂಬ ಹಲವು ಕುತೂಹಲದ ಪ್ರಶ್ನೆಗಳನ್ನು ಪಿಎಸ್ಐ ನವೀನ್ ಜಕ್ಕಲಿಯವರನ್ನು ಕೇಳಿ ಗೊಂದಲ ನಿವಾರಿಸಿಕೊಂಡರು.
ಮಕ್ಕಳಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸುವುದರ ಜತೆಗೆ ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂಬುದರ ಬಗ್ಗೆ ಪಿಎಸ್ಐ ನವೀನ್ ಜಕಲಿ ಅವರು ತಿಳುವಳಿಕೆ ನೀಡಿದರು.
Kshetra Samachara
30/07/2022 07:09 pm