ಹುಬ್ಬಳ್ಳಿ: 2020 ಆಗಷ್ಟ್ 6ರಂದು ಹಳೇ ಹುಬ್ಬಳ್ಳಿ ಅಲ್ತಾಜ್ ಸಭಾ ಭವನದ ಬಳಿ ರೌಡಿಶೀಟರ್ ಫ್ರೂಟ್ ಇರ್ಫಾನ್ ನನ್ನು ಶೂಟ್ ಮಾಡಿ ಹತ್ಯೆಗೈಯಲಾಗಿತ್ತು. ಶೂಟೌಟ್ ಪ್ರಕರಣದ ಹಿನ್ನೆಲೆಯ ವಿಚಾರಣೆಗಾಗಿ, ಭೂಗತ ಪಾತಕಿ ಯೂಸೂಫ್ ಬಚ್ಚಾಖಾನ್ ಸೇರಿದಂತೆ 14 ಆರೋಪಿಗಳನ್ನು ನಗರದ 4ನೇ ಅಧಿಕ ದಿವಾಣಿ ಮತ್ತು ಸತ್ರ ನ್ಯಾಯಾಲಯ ಹಾಗೂ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಈ 14 ಆರೋಪಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ಈ ಪ್ರಕರಣದ ವಿಚಾರಣೆಯನ್ನು, ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಿ ಆದೇಶಿಸಿತು.
ಧಾರವಾಡದ ಅಫ್ತಾಬ್ ಬೇಪಾರಿ, ತೌಸಿಫ್ ನಿಪ್ಪಾಣಿ, ಅತಿಯಾಬ್ಖಾನ್ ತಡಕೋಡ, ಹುಬ್ಬಳ್ಳಿಯ ಅಮೀರ್ ತಮಾಟಗಾರ, ಧಾರವಾಡದ ಮೊಹಿನುದ್ದೀನ್ ಪಟೇಲ್, ಮುಂಬೈ ಮೂಲದ ಯೂಸೂಫ್ ಬಚ್ಚಾಖಾನ್, ಮುಂಬೈನ ನೀಲೇಶ ನಂದಗಾವ್ಕರ, ಅನೂಪಸಿಂಗ್ ಸಿಂಗಿಲಾಲ್, ಮಾಮು ಅಲಿಯಾಸ್ ಸುನೀಲ ಬನ್ಸೋಡೆ, ನವನಾಥ ದಲಾಸ್, ಮೈಸೂರಿನ ಶಹಜಾನ್ ಅಶ್ರಫ್, ಸೈಯದ್ ಸೊಹೈಲ್ ಪೀರ್, ರಾಜೇಂದ್ರ ರಾವತ್, ಧಾರವಾಡದ ಮಹಮ್ಮದ್ ಹ್ಯಾರಿಶ್ ಪಠಾಣ ನ್ಯಾಯಾಲಯಕ್ಕೆ ಹಾಜರಾಗಿದ್ದ ಆರೋಪಿಗಳು.
ಹತ್ಯೆಯ ಕುರಿತು ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶುಕ್ರವಾರ ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಪ್ರೀತಿ.ಕೆ. ಅವರು ಮುಂದಿನ ವಿಚಾರಣೆಯನ್ನು ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಿ ಆದೇಶಿಸಿದರು. ಜಿಲ್ಲಾ ನ್ಯಾಯಾಧೀಶರು ಮುಂದಿನ ವಿಚಾರಣೆ ನಡೆಸಲಿದ್ದಾರೆ.
ಪ್ರಕರಣದ 11ನೇ ಆರೋಪಿ ಮುಂಬೈನ ಅವಿನಾಶ ಎಂಬಾತ ತಲೆಮರೆಸಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಈತನ ವಿಷಯವಾಗಿ ಹಳೇ ಹುಬ್ಬಳ್ಳಿ ಪೊಲೀಸರು ಪ್ರತ್ಯೇಕ ಚಾರ್ಜ್ಶೀಟ್ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
Kshetra Samachara
29/07/2022 11:24 pm