ಹುಬ್ಬಳ್ಳಿ: ಕರ್ತವ್ಯ ಲೋಪದ ಆರೋಪದಡಿ ಎಪಿಎಂಸಿ ನವನಗರ ಠಾಣಿಯ ಹೆಡ್ ಕಾನ್‌ಸ್ಟೆಬಲ್ ಗಣೇಶ ಬಡಿಗೇರ ಎಂಬುವರನ್ನು ಅಮಾನತು ಮಾಡಿ ಪೊಲೀಸ್ ಕಮಿಷನರೇಟ್ ಆದೇಶ ಹೊರಡಿಸಿದೆ.
ಎಪಿಎಂಸಿ- ನವರನಗರ ಠಾಣೆ ವ್ಯಾಪ್ತಿಯ ಈಶ್ವರ ನಗರದ ಮಹಾದೇವಿ ನೀಲಮ್ಮನವರ ಎಂಬುವರು ನಾಪತ್ತೆಯಾಗಿದ್ದರು. ಈ ಕುರಿತು ಪ್ರಕರಣ ದಾಖಲಿಸಲು ಮಹಿಳೆಯ ಪುತ್ರ ಜುಲೈ 2ರಂದು ರಾತ್ರಿ ಠಾಣೆಗೆ ಆಗಮಿಸಿದ್ದರು. ಆದರೆ ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ಅದೇ ದಿನ ರಾತ್ರಿ ಕಲಘಟಗಿ ಬಳಿ ಆ ಮಹಿಳೆಯನ್ನು ದುಷ್ಕರ್ಮಿಗಳು ಹತ್ಯೆಗೈದು ಸುಟ್ಟು ಹಾಕಿದ್ದರು. ಈ ಹಿನ್ನೆಲೆಯಲ್ಲಿ ಹೆಡ್ ಕಾನ್‌ಸ್ಟೆಬಲ್ ಬಡಿಗೇರ ಅವರನ್ನು ಅಮಾನತು ಮಾಡಲಾಗಿದೆ.
ಈ ಬಗ್ಗೆ ಬಡಿಗೇರ ಅವರು ಇನ್‌ಸ್ಪೆಕ್ಟರ್ ಬಾಳಪ್ಪ ಮಂಟೂರ ಅವರಿಗೆ ಮಾಹಿತಿ ನೀಡಿದ್ದರು. ಆದರೂ ಸಿಬ್ಬಂದಿಗೆ ಮಾತ್ರ ಶಿಕ್ಷೆ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ತನಿಖೆ ನಡೆಸಲಾಗುವುದು ಅಧಿಕಾರಿ ತಪ್ಪಿದ್ದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಸಾಹಿಲ್ ಬಾಗ್ಲಾ ತಿಳಿಸಿದ್ದಾರೆ.
Kshetra Samachara
08/07/2022 06:42 pm