ಕಲಘಟಗಿ: ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಹಾಗೂ ತಾಲೂಕ ಕಾನೂನು ಸೇವಾ ಸಮಿತಿ ವತಿಯಿಂದ ರಾಷ್ಟ್ರೀಯ ಮೆಗಾ ಲೋಕ ಅದಾಲತ್ ನಡಿಸಿ ಸುಮಾರು 113 ಪ್ರಕರಣಗಳನ್ನು ರಾಜಿ ಒಪ್ಪಂದ ಮೂಲಕ ಇತ್ಯರ್ಥ ಪಡಿಸಲಾಯಿತು.
ಸೀನಿಯರ್ ಸಿವಿಲ್ ನ್ಯಾಯಾಲಯದಲ್ಲಿ 30 ಪ್ರಕರಣ ಸೇರಿದಂತೆ ಕ್ರಿಮಿನಲ್ ಪ್ರಕರಣಗಳು, ಚೆಕ್ ಬೌನ್ಸ್ ಪ್ರಕರಣ, ಜೀವನಾಂಶ ಕೌಟಂಬಿಕ ವ್ಯಾಜ್ಯಗಳು, ವಾಟ್ನಿ ದಾವೆಗಳು, ವಸೂಲಿ, ಎಂ ವಿ ಸಿ ಪ್ರಕರಣ ಪರಿಹಾರ ಪ್ರಕರಣಗಳನ್ನು ರಾಜಿ ಮೂಲಕ ಬಗೆಹರಿಸಲಾಯಿತು. ಈ ಸಂದರ್ಭದಲ್ಲಿ ಸುಮಾರು 19,11,684 ರೂ ಪರಿಹಾರ ಘೋಷಣೆ ಮಾಡಲಾಯಿತು.
ತಾಲೂಕಿನ ಹಿರೇಹೋನ್ನಳ್ಳಿ ಗ್ರಾಮದ ಬಸವರಾಜ ಶಿವಲಿಂಗಪ್ಪ ಗುಡಗೇರಿ ಹಾಗೂ ಮಾರುತಿಗೌಡ ಪಾಟೀಲ ಕುಟಂಬದ 47 ಪಕ್ಷಗಾರರ ನಡುವೆ ಆಸ್ತಿ ವಿವಾದ ಕುರಿತು ಮೂರು ತಲೆಮಾರಿನಿಂದ ಇದ್ದ ಸಮಸ್ಯೆ ಒಂದೇ ದಿನ ನ್ಯಾಯಾಲಯದ ಮೆಗಾ ಲೋಕ ಆದಲತ್ ನಲ್ಲಿ ಇತ್ಯರ್ಥವಾಯಿತು.
ನ್ಯಾಯಾಧೀಶರಾದ ಗಣೇಶ ಎನ್ ರಾಜಿ ಸಂಧಾನ ಮೂಲಕ ಪ್ರಕರಣ ಇತ್ಯರ್ಥ ಮಾಡಿದರು ವಾದಿಪರ ವಕೀಲರಾಗಿ ಶಿವರುದ್ರಪ್ಪ ದನಿಗೂಂಡ ಹಾಗೂ ಪ್ರತಿವಾದಿ ಪರ ವಕೀಲ ನಿಂಗಪ್ಪ ಮುತ್ತೇನವರ ವಕಾಲತ್ತು ವಹಿಸಿದ್ದರು.
ವರದಿ: ಉದಯ ಗೌಡರ
Kshetra Samachara
25/06/2022 10:10 pm