ಧಾರವಾಡ: ಧಾರವಾಡ ಹೈಕೋರ್ಟ್ ಪೀಠದಲ್ಲಿ ಇಂದು ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 221 ಪ್ರಕರಣಗಳಲ್ಲಿ ಸುಮಾರು 4 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಪರಿಹಾರಕ್ಕೆ ಇತ್ಯರ್ಥಪಡಿಸಲಾಯಿತು.
ಹಿರಿಯ ನ್ಯಾಯಮೂರ್ತಿ ಕೆ.ಎಸ್.ಮುದಗಲ್, ನ್ಯಾಯಮೂರ್ತಿಗಳಾದ ಪ್ರದೀಪ ಸಿಂಗ್ ಯೆರೂರ್, ಎಂ.ಜಿ.ಎಸ್.ಕಮಲ್ , ಅದಾಲತ್‌ನ ಸದಸ್ಯರುಗಳಾದ ಎಂ.ಟಿ .ಬಂಗಿ , ಡಿ.ಎಲ್.ಲಾಡಖಾನ ಮತ್ತು ಎಮ್. ಸಿ .ಹುಕ್ಕೇರಿ ಅವರನ್ನೊಳಗೊಂಡ 3 ಪೀಠಗಳಲ್ಲಿ ಒಟ್ಟು 1227 ಪ್ರಕರಣಗಳನ್ನು ವಿಚಾರಣೆಗೆ ಗುರುತಿಸಿಕೊಂಡು, ಅವುಗಳಲ್ಲಿ ಒಟ್ಟು 221 ಪ್ರಕರಣಗಳನ್ನು 4,46,53,063 ಮೊತ್ತಕ್ಕೆ ಇತ್ಯರ್ಥಪಡಿಸಲಾಯಿತು.
ನ್ಯಾಯಮೂರ್ತಿಗಳಾದ ಎಂ.ಜಿ.ಎಸ್.ಕಮಾಲ್ ಹಾಗೂ ಎಂ.ಸಿ .ಹುಕ್ಕೇರಿ ವಕೀಲರವರ ಲೋಕ ಅದಲಾತ್ ಪೀಠವು ಜಮೀನಿನ ವ್ಯಾಜ್ಯಕ್ಕೆ ಸಂಬಂಧಿಸಿದಂತೆ 30 ವರ್ಷಗಳ ಹಳೆಯದಾದ ದಿವಾಣಿ ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಉಭಯ ಪಕ್ಷಗಾರರ ಸಮಕ್ಷಮ ಇತ್ಯರ್ಥಪಡಿಸಿರುವುದು ಈ ಬಾರಿಯ ರಾಷ್ಟ್ರೀಯ ಲೋಕ ಅದಾಲತ್‌ನ ಹೆಗ್ಗಳಿಕೆಯಾಗಿದೆ. ಇದರಿಂದ ಉಭಯ ಪಕ್ಷಗಾರರಿಗೆ ತುಂಬಾ ಅನುಕೂಲವಾಗಿದ್ದು ವ್ಯಾಜ್ಯ ಮುಕ್ತರಾಗಿರುತ್ತಾರೆ ಎಂದು ಹೈಕೋರ್ಟಿನ ನ್ಯಾಯಾಂಗದ ಅಧಿಕ ವಿಲೇಖನಾಧಿಕಾರಿ ಮತ್ತು ಉಚ್ಛ ನ್ಯಾಯಾಲಯ ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ವೆಂಕಟೇಶ ಆರ್.ಹುಲಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
25/06/2022 07:51 pm