ಹುಬ್ಬಳ್ಳಿ: ಹಳೆ ಹುಬ್ಬಳ್ಳಿಯಲ್ಲಿ ತಡರಾತ್ರಿ ಸಂಭವಿಸಿದ ಹಿಂಸಾಚಾರ ವಿಚಾರವಾಗಿ ಯುವ ಕಾಂಗ್ರೆಸ್ ಮುಖಂಡ ಶಹಜಮಾನ್ ಮುಜಾಹಿದ್ ಮಸೀದಿ ಧ್ವನಿವರ್ಧಕ ಬಳಸಿ ಶಾಂತಿಗಾಗಿ ಮನವಿ ಮಾಡಿಕೊಂಡಿದ್ದಾರೆ.
"ನಾನು ನಿಮ್ಮ ಸಹೋದರ ಶಹಜಮಾನ್ ಮುಜಾಹಿದ್. ನೀವೆಲ್ಲರೂ ಇಲ್ಲಿಂದ ತೆರಳಬೇಕೆಂದು ನಾನು ವಿನಂತಿಸುತ್ತೇನೆ. ಇದು ರಂಜಾನ್‌ನ ಪವಿತ್ರ ತಿಂಗಳು. ನಾವು ನಮ್ಮ ಮನೆಗಳಿಗೆ ಹಿಂತಿರುಗಿ ಪ್ರಾರ್ಥಿಸೋಣ. ಹಿಂಸೆ ಮಾಡುವ ಬದಲು ಶಾಂತಿ ಕಾಪಾಡಬೇಕು. 2 ವರ್ಷಗಳ ನಂತರ ಮಸೀದಿಗಳಲ್ಲಿ ತರಾವೀಹ್ ನಮಾಜ್ ನಡೆಸಲು ಅವಕಾಶ ನಮಗೆ ಸಿಕ್ಕಿದೆ. ನಾವು ಈ ಅವಕಾಶವನ್ನು ಈ ಬಾರಿಯೂ ಕಳೆದುಕೊಳ್ಳುತ್ತೇವೆ" ಎಂದು ಹಿಂಸಾಚಾರದಲ್ಲಿ ತೊಡಗಿದ್ದ ಜನರಿಗೆ ಯುವ ಕಾಂಗ್ರೆಸ್ ಮುಖಂಡ ಶಹಜಮಾನ್ ಮುಜಾಹಿದ್ ಮೈಕ್ ಮೂಲಕ ಮನವಿ ಮಾಡಿಕೊಂಡರು.
"ನಾನು ನಿಮ್ಮನ್ನು ಬೇಡುತ್ತೇನೆ. ದಯವಿಟ್ಟು ಕಾನೂನನ್ನು ಕೈಗೆ ತೆಗೆದುಕೊಳ್ಳಬೇಡಿ. ನಿಮ್ಮ ಹೆತ್ತವರ ಬಗ್ಗೆ ಯೋಚಿಸಿ. ನಮ್ಮ ಸಂಸ್ಥೆಗಳ ಬಗ್ಗೆ ಯೋಚಿಸಿ. ಕಲ್ಲು ಎಸೆಯಬೇಡಿ'' ಎಂದು ಹಿಂಸಾಚಾರದ ವೇಳೆ ಶಹಜಮಾನ್ ಮುಜಾಹಿದ್ ಕೇಳಿಕೊಂಡರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
17/04/2022 09:30 am