ಧಾರವಾಡ: ಧಾರವಾಡದ ನುಗ್ಗಿಕೇರಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನುಗ್ಗಿಕೇರಿಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ಕೊಡಬಾರದು ಎಂದು ಶ್ರೀರಾಮ ಸೇನೆ ಕಾರ್ಯಕರ್ತರು ಮನವಿ ಕೊಟ್ಟಿದ್ದರಾದರೂ ಕಳೆದ ಶನಿವಾರವೇ ಈ ರೀತಿ ಘಟನೆ ನಡೆಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಇಂಟಲಿಜೆನ್ಸಿ ರಿಪೋರ್ಟ್ ಕೂಡ ಇರಲಿಲ್ಲ. ಏಕಾಏಕಿ ಬಂದು ಕಲ್ಲಂಗಡಿ ಹಣ್ಣು ಒಡೆದು ಹಾಕಿದ್ದಾರೆ. ಘಟನೆ ಸಂಬಂಧ ಪೊಲೀಸರು ನಾಲ್ಕು ಜನರನ್ನು ಈಗಾಗಲೇ ಬಂಧಿಸಿದ್ದಾರೆ ಎಂದರು.
ನುಗ್ಗಿಕೇರಿ ದೇವಸ್ಥಾನ ಖಾಸಗಿ ಟ್ರಸ್ಟ್ಗೆ ಸಂಬಂಧಿಸಿದ್ದು. ಘಟನೆ ಆದ ತಕ್ಷಣವೇ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಪೊಲೀಸ್ ಇಲಾಖೆ ತನ್ನ ಕೆಲಸ ಮಾಡುತ್ತಿದೆ. ನುಗ್ಗಿಕೇರಿ ದೇವಸ್ಥಾನ ಬಹಳ ಶಾಂತವಾಗಿರುವ ದೇವಸ್ಥಾನ ಮೊದಲ ಬಾರಿಗೆ ಅಲ್ಲಿ ಈ ರೀತಿಯ ಘಟನೆ ನಡೆದಿದೆ. ಎಸ್ಪಿ ಅವರ ಜೊತೆ ಮಾತನಾಡಿ ಮುಂದಿನ ಕ್ರಮದ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ. ದೇವಸ್ಥಾನ ಖಾಸಗಿ ಟ್ರಸ್ಟ್ಗೆ ಸಂಬಂಧಿಸಿದ್ದಾಗಿದ್ದರಿಂದ ಅವರು ಯಾವ ತೀರ್ಮಾನ ಕೈಗೊಳ್ಳುತ್ತಾರೋ ಅದಕ್ಕೆ ನಾವೂ ಸಪೋರ್ಟ್ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
Kshetra Samachara
11/04/2022 03:36 pm