ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಕಲಿಕಾ ಪ್ರಗತಿ ಪರಿಶೀಲನಾ ಸಭೆ

ಧಾರವಾಡ: ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ಅನಕ್ಷರಸ್ಥ ಹಾಗೂ ಅರೆಸಾಕ್ಷರ ಬಂಧಿಗಳಿಗಾಗಿ ನಡೆದ ಸಾಕ್ಷರತಾ ಕಾರ್ಯಕ್ರಮದ ಕಲಿಕಾ ಪ್ರಗತಿ ಪರಿಶೀಲನಾ ಸಭೆಯನ್ನು ಕಾರಾಗೃಹದ ಗಾಂಧಿ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಲೋಕ ಶಿಕ್ಷಣ ನಿರ್ದೇಶನಾಲಯದ ಉಪನಿರ್ದೇಶಕ ಎನ್.ಎಚ್. ನಾಗೂರ ಮಾತನಾಡಿ, ಬಂಧಿಗಳು ಕಾರಾಗೃಹದ ಅವಧಿಯಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡದೇ ಕಲಿಕೆಯಲ್ಲಿ ತೊಡಗಿಸಿಕೊಂಡು ಸಂಪೂರ್ಣ ಸಾಕ್ಷರತೆಯನ್ನು ಹೊಂದಿ ಬಿಡುಗಡೆಯ ನಂತರ ಸಮಾಜದ ಮುಖ್ಯವಾಹಿನಿಯನ್ನು ಸೇರಿಕೊಂಡು ಒಳ್ಳೆ ಜೀವನ ರೂಢಿಸಿಕೊಳ್ಳಲು ತಿಳಿಸಿದರು.

ಕಾರಾಗೃಹ ಅಧೀಕ್ಷಕ ಎಂ.ಎ.ಮರಿಗೌಡ ಮಾತನಾಡಿ, ಅನಕ್ಷರಸ್ಥ ಹಾಗೂ ಅರೆಸಾಕ್ಷರ ಬಂಧಿಗಳು ಕನಿಷ್ಠ ಕಲಿಕೆ ಸಾಧಿಸಿ ಬಿಡುಗಡೆಯ ನಂತರವೂ ಸ್ವಾವಲಂಭಿಯಾಗಿ ಹಾಗೂ ಗೌರವಯುತ ಜೀವನ ರೂಪಿಸಿಕೊಳ್ಳುವ ಸದುದ್ದೇಶದಿಂದ ಕಾರ್ಯಕ್ರಮವನ್ನು ನವೆಂಬರ್ 2021 ರಿಂದ ಪ್ರಾರಂಭಿಸಲಾಗಿದೆ. 97 ಬಂಧಿಗಳು ಸಾಕ್ಷರತೆ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ತೊಡಗಿಕೊಂಡಿದ್ದು, ಈಗಾಗಲೇ ಶೇಕಡಾ 80% ರಷ್ಟು ಸಾಕ್ಷರತಾ ಗುರಿ ಸಾಧಿಸಿದ್ದು, ಮಾರ್ಚ ಅಂತ್ಯದೊಳಗಾಗಿ ಕಾರಾಗೃಹದಲ್ಲಿ ಸಂಪೂರ್ಣ ಸಾಕ್ಷರತೆ ಹೊಂದಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ವಯಸ್ಕರ ಶಿಕ್ಷಣ ಅಧಿಕಾರಿ ಎ.ಎ.ಖಾಜಿ ಭಾಗವಹಿಸಿದ್ದರು. ಸಂಸ್ಥೆಯ ಶಿಕ್ಷಕ ಪಿ.ಬಿ.ಕುರಬೆಟ್ಟ ಸ್ವಾಗತಿಸಿದರು. ಜಿಲ್ಲಾ ಸಾಕ್ಷರತಾ ಶಿಕ್ಷಣ ಸಂಯೋಜಕ ರಾಚಣ್ಣವರ ವಂದಿಸಿದರು.

Edited By :
Kshetra Samachara

Kshetra Samachara

15/03/2022 10:47 pm

Cinque Terre

10.35 K

Cinque Terre

0

ಸಂಬಂಧಿತ ಸುದ್ದಿ