ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಾಕು ಇರಿದ ಆರೋಪಿಗಳಿಗೆ 5 ವರ್ಷ ಕಾರಾಗೃಹ ಶಿಕ್ಷೆ

ಹುಬ್ಬಳ್ಳಿ : ಕರಾವಳಿ ಫಿಶ್ ಲ್ಯಾಂಡ್ ಹೋಟೆಲ್ ಮಾಲೀಕನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ಇಬ್ಬರು ಆರೋಪಿಗಳಿಗೆ ಹುಬ್ಬಳ್ಳಿಯ 5 ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ 5 ವರ್ಷ ಕಾರಾಗೃಹ ಶಿಕ್ಷೆ ಹಾಗೂ 52 ಸಾವಿರ ದಂಡ ವಿಧಿಸಿದೆ.

ಅಶ್ವಾಕ ಸುತಾರ , ಮಹ್ಮದ್ ಆರೀಫ್ ಐನಾಪುರಿ ಶಿಕ್ಷೆಗೆ ಒಳಗಾದವರು, ಗಿರಿಯಾಲ ರೋಡ್ ಪಕ್ಕಕ್ಕೆ ಇರುವ ಕಾಮರೆಡ್ಡಿ ಕಾಂಪ್ಲೆಕ್ಸ್ ನಲ್ಲಿದ್ದ ಕರಾವಳಿ ಫಿಷ್ ಲ್ಯಾಂಡ್ ಹೋಟೆಲ್ ಮಾಲೀಕ ಉದಯ ಮರಕಲ್ ಗಾಯಗೊಂಡಿದ್ದರು.

ಘಟನೆ ಹಿನ್ನೆಲೆ : 2018 ಫೆ . 31 ರಂದು ಹೋಟೆಲ್ ನಲ್ಲಿ ವ್ಯಾಪಾರ ಮಾಡುತ್ತಿದ್ದಾಗ ರಾತ್ರಿ 10 ರ ಸುಮಾರಿಗೆ ಬಂದ ಆರೋಪಿತರು ಸರಾಯಿ ಬಾಟಲಿಗೆ ನೀರು ಮಿಕ್ಸ್ ಮಾಡಲು ಹೋಟೆಲ್ ನಲ್ಲಿದ್ದ ನೀರಿನ ಜಗ್ಗು ತೆಗೆದುಕೊಂಡಿದ್ದಕ್ಕೆ ಜಗಳ ಶುರುವಾಗಿದೆ.

ಈ ವೇಳೆ ಆರೋಪಿತರು ಅವಾಚ್ಯವಾಗಿ ನಿಂದಿಸಿದ್ದಾರೆ. ಇದನ್ನು ಪ್ರಶ್ನಿಸಿದಾಗ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 5 ನೇ ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ.ಎನ್ . ಗಂಗಾಧರ ಶಿಕ್ಷೆ ವಿಧಿಸಿದ್ದಾರೆ . ಸರಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಸುಮಿತ್ರಾ ಎಂ. ಅಂಚಟಗೇರಿ ವಾದ ಮಂಡಿಸಿದ್ದರು.

Edited By : Nirmala Aralikatti
Kshetra Samachara

Kshetra Samachara

04/03/2022 02:44 pm

Cinque Terre

9.28 K

Cinque Terre

1

ಸಂಬಂಧಿತ ಸುದ್ದಿ