ಅಣ್ಣಿಗೇರಿ: ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ರಾಯಚೂರು ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡ ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಕರ್ನಾಟಕ ದಲಿತರ ವಿಮೋಚನಾ ಸಮಿತಿ ಅಣ್ಣಿಗೇರಿ ತಾಲೂಕು ಘಟಕದ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಈ ಸಂಬಂಧ ಅಣ್ಣಿಗೇರಿ ತಾಲೂಕಿನ ದಂಡಾಧಿಕಾರಿ ಮಂಜುನಾಥ ಅಮಾಸೆ ಅವರಿಗೆ ಸಮಿತಿಯ ಕಾರ್ಯಕರ್ತರು ಮನವಿ ಸಲ್ಲಿಸಿದರು. ಈ ವೇಳೆ ಘಟಕದ ಅಧ್ಯಕ್ಷ ರಾಘವೇಂದ್ರ ರಾಮಗಿರಿ, ಉಪಾಧ್ಯಕ್ಷ ರಾಜು ಹಳ್ಳಿಕೇರಿ, ಪ್ರಧಾನ ಕಾರ್ಯದರ್ಶಿ ರಘು ಅಬ್ಬಿಗೇರಿ, ಹುಲಗೇಶ್ ಹಳ್ಳಿಕೇರಿ, ದಲಿತ ಮುಖಂಡರು ಯಲ್ಲಪ್ಪ ದುಂದೂರು, ಸಚಿನ್ ಬೆಳಗಲಿ ಉಪಸ್ಥಿತರಿದ್ದರು.
Kshetra Samachara
27/01/2022 04:00 pm